‘ಹಂತಿ’ ಹೊರಪೇಟೆ ಮಲ್ಲೆಶಪ್ಪ ಅವರು ಸಂಪಾದಿಸಿರುವ ಕೃತಿಯಾಗಿದೆ. ಕನಕದಾಸರು 'ಕುರುಬರ ಜಾತಿಯಲ್ಲಿ ಹುಟ್ಟಿದರೂ ಕುರುಬರಾಗಿ ಉಳಿಯಲಿಲ್ಲ, ತಾಳ-ತಂಬೂರಿ ಹಿಡಿದು ಹರಿದಾಸರಾಗಿ ವೈಷ್ಣವ ಮತಾನುಯಾಯಿಯಂತೆ ಕಂಡರೂ, ಜನಿವಾರ ಧರಿಸಿ ವೈಷ್ಣವರಾಗಲಿಲ್ಲ. ಅವರೊಬ್ಬ “ವಿಶ್ವಮಾನವರಾದರು”. ಯಾವುದೇ ಜಾತಿ ಮತ ಪಂಥಗಳಿಗೆ ಅಂಟಿಕೊಳ್ಳದ ಕನಕದಾಸರ ಕಾವ್ಯ ಕೀರ್ತನೆಗಳು ಯಾವಾಗಲೂ ಮಂತ್ರದಂತೆ ಪಠಣೆಯಾಗಬೇಕು. “ಆತ್ಮ ಯಾವ ಕುಲ-ಜೀವ ಯಾವ ಕುಲ” ದಂತಹ ಸಂದೇಶ ವಾಕ್ಯಗಳು ವೇದ ವಾಕ್ಯದಂತೆ ಘೋಷಣೆಯಾಗಬೇಕು. ಈ ಹಿನ್ನಲೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದವರು ಹೊರತರುತ್ತಿರುವ “ಹಂತಿ” ವಿಶಿಷ್ಟವಾದುದು.
©2024 Book Brahma Private Limited.