ವರಕವಿ ಜನ್ಮದಿನದ ಅಂಗವಾಗಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ ವಾರ್ಷಿಕವಾಗಿ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಜಾನಪದ ತಜ್ಞ, ಕವಿ ಡಾ. ಸೋಮಶೇಖರ ಇಮ್ರಾಪುರ ಆಯ್ಕೆಯಾಗಿದ್ದು, ಜ. 31ರಂದು ಬೇಂದ್ರೆ ಅವರ 126ನೇ ಜನ್ಮದಿನ ಸಂದರ್ಭದಲ್ಲಿ ಸಾಧನಕೇರಿಯ ಬೇಂದ್ರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ ಎಂಬುದಾಗಿ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ತಿಳಿಸಿದ್ದಾರೆ.
ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ಗುರುದೇವಿ. ಹುಲ್ಲಪ್ಪನವರಮಠ, ಸದಸ್ಯರಾದ ಡಾ. ಎಂ.ಬಿ. ಹೂಗಾರ, ಡಾ. ವೆಂಕಟಗಿರಿ: ದಳವಾಯಿ ಅವರನ್ನು ಒಳಗೊಂಡ ತಂಡ ಒಟ್ಟು ಮೂವರ ಹೆಸರನ್ನು ಆಯ್ಕೆ ಮಾಡಿ ನೀಡಿದ್ದರು. ಬುಧವಾರ ಏರ್ಪಡಿಸಿದ್ದ ಟ್ರಸ್ಟ್ ಮಂಡಳಿ ಸಭೆಯಲ್ಲಿ ನಗರದ ಡಾ. ಸೋಮಶೇಖರ ಇಮ್ರಾಪುರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಸೋಮಶೇಖರ ಇಮಾಪುರ ಅವರ ಸಾಧನೆ: ಮೂಲತಃ ಗದಗ ಜಿಲ್ಲೆ ಅಬ್ಬಿಗೇರಿಯವರಾದ ಡಾ. ಸೋಮಶೇಖರ ಇಮ್ರಾಪುರ ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, ವಿವಿಯ ವಿದ್ವತ್ ವಲಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು, ಕನ್ನಡ ಕಾವ್ಯ, ವಿಮರ್ಶೆ, ಜಾನಪದ ಕಲೆ, ಸಾಹಿತ್ಯ ಸಂಗ್ರಹ, ಕಲಾ ಪ್ರದರ್ಶನ, ಸಂಸ್ಕೃತಿಗೆ ಸಂಬಂಧಿಸಿ 38 ಕೃತಿಗಳನ್ನು ರಚಿಸಿದ್ದಾರೆ.
“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನ...
"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...
"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...
©2024 Book Brahma Private Limited.