ಲೇಖಕರಿಗೆ ಕಂಡ ವೀರಪ್ಪನ್‌ನನ್ನು ಈ ಕೃತಿಯಲ್ಲಿ ಅವರು ತೆರೆದಿಟ್ಟಿದ್ದಾರೆ


“ವೀರಪ್ಪನ್‌ ಒಬ್ಬ ಮನುಷ್ಯನಾಗಿ ಹೇಗಿದ್ದ ಎನ್ನುವುದನ್ನು, ಅವನ ಆಸಕ್ತಿ, ಕಾಡು, ಅಲ್ಲಿನ ಪ್ರಾಣಿಗಳ ಬಗ್ಗೆ ಆತನಿಗಿದ್ದ ತಿಳಿವಳಿಕೆ, ಅವನಲ್ಲಿದ್ದ ಸುಪ್ತ ಕಲಾವಿದನ ಪರಿಚಯವನ್ನು ಮಾಡಿಕೊಟ್ಟಿದೆ,” ಎನ್ನುತ್ತಾರೆ ಸುಷ್ಮಿತಾ ನೇರಳಕಟ್ಟೆ ಅವರು ಕೃಪಾಕರ ಸೇನಾನಿ. ಅವರ “ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು” ಕೃತಿ ಕುರಿತು ಬರೆದ ವಿಮರ್ಶೆ.

ಆಗಿನ್ನು ನಾನು ತುಂಬ ಸಣ್ಣವಳು. ಅಣ್ಣ ನನ್ನ ಬಳಿ ನೀನು ವೀರಪ್ಪನ್‌ ನೋಡಿದ್ದೀಯ ಅಂತ ಕೇಳಿದ್ದ. ನನಗೆ ಆ ವಯಸ್ಸಲ್ಲಿ ವೀರಪ್ಪನ್‌ ಬಗ್ಗೆ ಏನೂ ಗೊತ್ತಿರಲಿಲ್ಲ. ಇಲ್ಲ ಅಂದೆ. ಅಣ್ಣ ಆಗ ಎದುರಿನಿಂದ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ತೋರಿಸಿ ಅವರೇ ನೋಡು ಅಂದ. ನಾನು ಹೌದು ಅಂತ ನಂಬಿದ್ದೆ. ಕೆಲವೇ ದಿನಗಳಲ್ಲಿ ಆ ವ್ಯಕ್ತಿ ವೀರಪ್ಪನ್‌ ಅಲ್ಲ, ಅವರ ಪೊದೆ ಮೀಸೆ ನೋಡಿ ಎಲ್ಲರು ಹಿಂದಿನಿಂದ ಅವರನ್ನು ಹಾಗೆ ಕರೆಯುತ್ತಾರೆ ಅಂತ ಗೊತ್ತಾಯ್ತು. ಹಾಗೆಯೇ ವೀರಪ್ಪನ್‌ ಅಂದರೆ ಕಾಡುಗಳ್ಳ ಅನ್ನೋದು ತಿಳಿಯಿತು. ಮುಂದೆ ವೀರಪ್ಪನ್‌ ಕೌರ್ಯದ ಬಗ್ಗೆ ಅರ್ಥ ಮಾಡಿಕೊಳ್ಳುವ ವಯಸ್ಸಿಗೆ ಬಂದಾಗ ವೀರಪ್ಪನ್‌ ಯುಗ ಅಂತ್ಯವಾಗಿ, ಅವನ ಕಥೆಗಳು ಹಿನ್ನೆಲೆಗೆ ಸರಿದಿತ್ತು. ನನಗೆ ವೀರಪ್ಪನ್‌ನ ಕುರಿತು ಅಲ್ಪಸ್ಪಲ್ಪ ತಿಳಿದಿದ್ದು ಎ.ಆರ್‌. ರಮೇಶ್‌ ಅವರ ನಿರ್ದೇಶನದಲ್ಲಿ ಕಿಶೋರ್‌ ಅವರ ಅಭಿನಯದಲ್ಲಿ ಬಂದ ಅಟ್ಟಹಾಸ ಸಿನಿಮಾ ನೋಡಿ. ಮುಂದೆ ಟೈಗರ್‌ ಬಿ.ಬಿ. ಅಶೋಕ್‌ ಕುಮಾರ್‌ ಅವರ ಬುಲೆಟ್‌ ಸವಾರಿ -2 ಹುಲಿಯ ನೆನಪುಗಳಲ್ಲಿ ವೀರಪ್ಪನ್‌ ಕೌರ್ಯದ ಇನ್ನೊಂದು ಮುಖದ ಪರಿಚಯ ನನಗಾಗಿತ್ತು. ಆದರೆ ಅದಲ್ಲದೆಯೂ ವೀರಪ್ಪನ್‌ ಒಬ್ಬ ಮನುಷ್ಯನಾಗಿ ಹೇಗಿದ್ದ ಎನ್ನುವುದನ್ನು, ಅವನ ಆಸಕ್ತಿ, ಕಾಡು, ಅಲ್ಲಿನ ಪ್ರಾಣಿಗಳ ಬಗ್ಗೆ ಆತನಿಗಿದ್ದ ತಿಳಿವಳಿಕೆ, ಅವನಲ್ಲಿದ್ದ ಸುಪ್ತ ಕಲಾವಿದನ ಪರಿಚಯವನ್ನು ಮಾಡಿಕೊಟ್ಟಿದ್ದು ಕೃಪಾಕರ ಸೇನಾನಿ ಅವರ ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು ಕೃತಿ.

ಹಾಗಂತ ಇಲ್ಲಿ ವೀರಪ್ಪನ್‌ನನ್ನು ಒಳ್ಳೆಯವನಂತೆ ಬಿಂಬಿಸುವ ಪ್ರಯತ್ನವನ್ನು ಅವರು ಮಾಡಿಲ್ಲ. ಅವರಿಗೆ ವೀರಪ್ಪನ್‌ ಹೇಗೆ ಕಂಡನೋ ಅದನ್ನು ನಮಗೆ ತಿಳಿಸುವ ಪ್ರಯತ್ನ ಇಲ್ಲಾಗಿದೆ.

ಕೃಪಾಕರ ಸೇನಾನಿ ಅವರನ್ನು ವೀರಪ್ಪನ್‌ ಕಿಡ್ನಾಪ್‌ ಮಾಡಿ ಹದಿನಾಲ್ಕು ದಿನಗಳ ಕಾಲ ಸೆರೆಯಲ್ಲಿಟ್ಟಿದ್ದ. ಆ ಹದಿನಾಲ್ಕು ದಿನಗಳಲ್ಲಿ ಲೇಖಕರಿಗೆ ಕಂಡ ವೀರಪ್ಪನ್‌ನನ್ನು ಈ ಕೃತಿಯಲ್ಲಿ ಅವರು ತೆರೆದಿಟ್ಟಿದ್ದಾರೆ. ಹದಿನಾಲ್ಕು ದಿನಗಳ ನಂತರ ಸೆರೆಯಾಳಾಗಿದ್ದವರ ಬಿಡುಗಡೆ ಆದಾಗ ವೀರಪ್ಪನ್‌ ಹಾಗೂ ಅವನ ಸಹಚರರ ಕಣ್ಣಲ್ಲಿ ಮಾತ್ರವಲ್ಲದೇ ಸೆರೆಯಾಳಾಗಿದ್ದ ಕೆಲವರ ಕಣ್ಣಲ್ಲೂ ಹನಿಗಳು ಶೇಖರಗೊಂಡಿದ್ದು ಓದಿದಾಗ ಎಂಥದೋ ಬೇಸರದ ಭಾವ ನಮ್ಮನ್ನು ಕಾಡದೇ ಇರದು.

ವೀರಪ್ಪನ್‌ ಒಳ್ಳೆಯವನೋ, ಕೆಟ್ಟವನೋ ಎನ್ನುವುದನ್ನೆಲ್ಲ ಪಕ್ಕಕ್ಕಿಟ್ಟು ಒಂದೊಳ್ಳೆ ಅನುಭವ ಕಥನ ಓದಿದ ಖುಷಿ ಈ ಪುಸ್ತಕ ನೀಡದೇ ಇರದು.

MORE FEATURES

ಯಕ್ಷಗಾನ ಕಲಾಸಕ್ತಿ ಕರಾವಳಿಯಲ್ಲಿ ಹುಟ್ಟಿದವರ ರಕ್ತಗುಣ ಎಂದರೂ ತಪ್ಪಲ್ಲ

14-04-2025 ಬೆಂಗಳೂರು

“ವೈದ್ಯಕೀಯ ವೃತ್ತಿ ಜೊತೆ ಅವರ ಸಾಹಿತ್ಯಾಸಕ್ತಿ ಮೇಳವಿಸಿ ತಮ್ಮ ಬದುಕು ಚಿಂತನೆಗಳನ್ನು ಡಾ. ಪಾಂಗಾಳರು ಕಟ್ಟಿಕೊಂಡ...

ಕುಂಟಿನಿಯವರ ಶೈಲಿ ವಿಶಿಷ್ಟ

14-04-2025 ಬೆಂಗಳೂರು

"ಕುಂತಿ ಮತ್ತು ಮಂತ್ರ ಫಲದಿಂದ ಹಿಡಿದು ಗಾಂಧಾರಿಯವರೆಗೂ ವಿಸ್ತಾರವಾದ ಕಥೆ ಮುಂದುವರಿಯುತ್ತದೆ. ಮುಂದೆ ಧೃತಾರಾಷ್ಟ್...

ನಮ್ಮ ಜಗತ್ತು ಸಹಿಸಿಕೊಳ್ಳಬಹುದಾದ ವಿಕಾಸಕ್ಕೆ ಒಂದು ಮಿತಿಯಿದೆ

14-04-2025 ಬೆಂಗಳೂರು

"ಭಾರತದಲ್ಲಿನ ಒಗ್ಗೂಡುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಸ್ಟ್ರೋಏಷ್ಯಾಟಿಕ್ ಪುರುಷರ ಆರಂಭಿಕ ವಲಸೆಯನ್ನು ಹೊರ...