"ಮೊದಮೊದಲು ಏನಾದರೂ ಸಾಧಿಸಬೇಕಾದರೆ ಕಷ್ಟವಾಗುತ್ತದೆ. ಮನಸ್ಸು ಮೂಡನ್ನು ಸಹ ಹಾಳು ಮಾಡುತ್ತದೆ. ನಿಧಾನವಾಗಿ ಕೇಂದ್ರಿಕರಸಿ ಮನಸ್ಸು ಹತೋಟಿಯಲ್ಲಿಡಬೇಕು, ಆಗ ನಾವು ಅಂದುಕೊಂಡ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಯಾವಾಗಲೂ ಮನಸ್ಸುನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಇಲ್ಲವಾದರೆ, ಮನಸೇ ನಮ್ಮನ್ನು ಅದರ ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಎಂಬುದನ್ನು ನಾವು ಅರಿಯಬೇಕು," ಎನ್ನುತ್ತಾರೆ ಚೈತ್ರಾ ಹಂಪಿನಕಟ್ಟಿ. ಅವರು ರಾಬಿನ್ ಶರ್ಮಾ ಅವರ ‘ಫೆರಾರಿ ಮಾರಿದ ಫಕೀರ’ ಕೃತಿ ಕುರಿತು ಬರೆದ ವಿಮರ್ಶೆ.
ನೋವನ್ನು ಮೀರಬೇಕಾದರೆ ಮೊದಲು ಅದನ್ನು ಅನುಭವಿಸಬೇಕಷ್ಟೇ!
ಒಬ್ಬ ಮನುಷ್ಯ ಏನಾದರೂ ಸಾಧಿಸಬೇಕಾದರೆ ಬಹಳ ಅಡೆತಡೆಗಳುಂಟಾಗುತ್ತವೆ. ಅವುಗಳನ್ನು ಹಂತಹಂತವಾಗಿ ನಾವು ಎದುರಿಸಬೇಕಾಗುತ್ತದೆ. ಒಬ್ಬ ಮನುಷ್ಯ ಗುರಿಯನ್ನು ಮುಟ್ಟಬೇಕಾದರೆ, ಹಲವು ರೀತಿ ರಿವಾಜುಗಳನ್ನು ಅನುಸರಿಸಿ ಅವನು ತನ್ನ ಗುರಿಯನ್ನು ಮುಟ್ಟಬೇಕು, ಇಲ್ಲವಾದರೆ ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಸವಿರುವುದಿಲ್ಲ, ಹಾಗೇಯೆ ಮನುಷ್ಯ ಮೊದಲು ತನ್ನ ದೇಹ ಮತ್ತು ಮನಸ್ಸುನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.
ನಾವು ನಮ್ಮ ದೇಹವನ್ನು ಸರಿಯಾಗಿ ಬಳದೇ ಇದ್ದರೆ ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಮತ್ತು ಮನಸ್ಸನ್ನು ಸರಿಯಾಗಿ ಬಳಸದೆ ಇದ್ದರೆ ಅದು ಕೂಡ ದುರ್ಬಲವಾಗುತ್ತದೆ. ಯಾವಾಗಲು ಮನಸ್ಸು ಕೋತಿಯ ಹಾಗೆ ಅದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು, ಕೇಂದ್ರಿಕರಿಸಬೇಕು, ಮನಸ್ಸು ಹೇಳಿದಂತೆ ದೇಹ ಕೇಳಬೇಕು , ದೇಹ ಹೇಳಿದಂತೆ ಮನಸು ಕೇಳಿದರೆ ಅದು ದುರ್ಬಲವಾಗುವುದು ನಿಜ.
ನಾವು ಸಾಧಿಸಬೇಕಾದ್ದು ಬಹಳ ಇದೆ ಎಂದಾಗ ಸರಿಯಾದ ಪಾಲನೆ ಬಹಳ ಮುಖ್ಯ ನಮ್ಮ ದಿನಚರಿ ಕೂಡ ಮುಖ್ಯಪಾತ್ರ ವಹಿಸುತ್ತದೆ. ನಾವು ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಏನೇನು ಮಾಡುತ್ತೇವೆ ಎಂಬುದು ಕೂಡ ನಮ್ಮ ಜೀವನದಲ್ಲಿ ಅತ್ಯುನ್ನತ ಮೌಲ್ಯಗಳ ಅಭಿವೃದ್ಧಿಗೆ ಕಾರಣವಾಗುತ್ತವೆ. ನಾವು ಏನಾದರೂ ಸಾಧಿಸಬೇಕಾದರೆ ಏಕಗ್ರಾತೆ ಬಹಳ ಮುಖ್ಯ ಪಾತ್ರವಹಿಸುತ್ತದೆ.
ಮೊದಮೊದಲು ಏನಾದರೂ ಸಾಧಿಸಬೇಕಾದರೆ ಕಷ್ಟವಾಗುತ್ತದೆ. ಮನಸ್ಸು ಮೂಡನ್ನು ಸಹ ಹಾಳು ಮಾಡುತ್ತದೆ. ನಿಧಾನವಾಗಿ ಕೇಂದ್ರಿಕರಸಿ ಮನಸ್ಸು ಹತೋಟಿಯಲ್ಲಿಡಬೇಕು, ಆಗ ನಾವು ಅಂದುಕೊಂಡ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಯಾವಾಗಲೂ ಮನಸ್ಸುನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಇಲ್ಲವಾದರೆ, ಮನಸೇ ನಮ್ಮನ್ನು ಅದರ ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಎಂಬುದನ್ನು ನಾವು ಅರಿಯಬೇಕು.
ಮನಸ್ಸು ಯಾವಾಗಲು ಬಹಳ ಯೋಚನೆಗಳಿಂದ ಕೂಡಿದ ಖಜಾನೆ ತರ ನಾವು ಏನನ್ನು ಒಳಗೆ ಹಾಕುತ್ತೆವೆ ಅದನ್ನು ತೆಗೆದುಕೊಂಡು ಸಾವಿರಾರು ಪ್ರಶ್ನೆಗಳನ್ನು ಹುಟ್ಟು ಹಾಕಿ ಒಳಗಿಂದಲೆ ನಮ್ಮನ್ನು ಕೊರೆಯಲು ಆರಂಭಿಸುತ್ತದೆ. ಮನಸ್ಸು ಸಹಸ್ರಾರು ಯೋಚನೆಗಳಿಂದ ಕೂಡಿರುತ್ತೆ. ಹಾಗಾಗಿ ನಾವು ಏನಾದರೂ ಪಡೆಯಬೇಕಂದರೆ ಮನಸ್ಸಿನಲ್ಲಿ ಅದನ್ನು ರಚಿಸಬೇಕು, ಅದನ್ನು ಅಂದುಕೊಳ್ಳಬೇಕು, ಅದಕ್ಕೆ ಅಂತಲೆ ಒಂದು ಪ್ರಿಯಾರಿಟಿ ಕೊಡಬೇಕು. ಅದರ ಬಗ್ಗೆ ಹೆಚ್ಚೆಚ್ಚು ಕೆಲಸವನ್ನು ಮಾಡಬೇಕು.
ಜೀವನದಲ್ಲಿ ಗುರಿ ಎಂಬುದು ಬಹಳ ಮುಖ್ಯ. ಗುರಿ ಇಲ್ಲದವನಿಗೆ ಆಯಾಸ ಹೆಚ್ಚು , ಏಕೆಂದರೆ ಯಾವುದೇ ಕೆಲಸ ಕಾರ್ಯದಲ್ಲಿ ತೊಡಗದವನಿಗೆ ಅನೇಕ ರೀತಿ ಮಾನಸಿಕವಾಗಿ ದೈಹಿಕವಾಗಿರಲು ಸಾಧ್ಯವಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ನಾವು ಏನಾದರು ಸಾಧಿಸಬೇಕೆಂದರೆ ಸಣ್ಣ ಸಣ್ಣ ಪ್ರಯತ್ನದಿಂದಲೇ ದೊಡ್ಡ ದೊಡ್ಡ ಸಾಧನೆಗೆ ನೇರವಾಗುತ್ತದೆ.
"ಮನಸ್ಸು ಶಕ್ತಿಯ ಬಹುದೊಡ್ಡ ಉಗ್ರಾಣ"
ನಾವು ನಮ್ಮ ಮನಸ್ಸಿನ ಮೇಲೆ ಸಲ್ವ ಒತ್ತಡವನ್ನು ಹೇರಬೇಕು ಹಾಗಾದರೆ ಮಾತ್ರ ನಮ್ಮ ಗುರಿಯನ್ನು ತಲುಪಲು ಸಾಧ್ಯ. ಹೊಸ ಯೋಜನೆಗಳನ್ನು ಕೈಗೊಳ್ಳಬೇಕು, ಅದರ ಮೇಲೆ ಒಂದಿಷ್ಟು ಕೆಲಸವನ್ನು ಮಾಡಬೇಕು, ಒಬ್ಬ ವ್ಯಕ್ತಿ ಹೆಂಗೆಲ್ಲ ಬದುಕಬಹದು ಎಂಬುದನ್ನು ತಿಳಿಯಬೇಕು ಹಾಗೆಯೇ ನಮ್ಮ ಯೋಚನೆಗಳು ಕೂಡ ಯಾವಾಗಲೂ ಪಾಸಿಟಿವ್ ವೇ ದಲ್ಲಿ ನಾವು ಚಿಂತಿಸಬೇಕು ಮತ್ತೆ ನಾವು ಸಮತೊಲನದ ಜೀವನವನ್ನು , ಆರೋಗ್ಯಕರವಾದ ಜೀವನವನ್ನು ಆಳವಡಿಸಿಕೊಳ್ಳಬೇಕು,.
ಆರೋಗ್ಯಕರವಾದ ಜೀವನವನ್ನು ನಡೆಸುವುದು ಹೇಗೆಂದರೆ, ದಿನ ನಿತ್ಯ ವ್ಯಾಯಾಮ, ಪ್ರಾಣಯಾಮ, ಧ್ಯಾನ , ಪೌಷ್ಟಿಕ ಆಹಾರ ಸೇವೆನೆಯಿಂದ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು, ಅಷ್ಟಂಗ ಯೋಗದ ಪ್ರಕಾರ ನಮ್ಮ ಉತ್ತವಮವಾದ ಜೀವನವನ್ನು ಸಾಧಿಸಲು ಸಾಧ್ಯ , ವ್ಯಾಯಾಮ ಮಾಡುವುದರಿಂದ ದೇಹವನ್ನು ಮನಸ್ಸುನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು, ದೇಹ, ಮನಸ್ಸು ಮತ್ತು ಆತ್ಮ ಈ ಮೂರನ್ನು ಹತೊಟಿಯಲ್ಲಿಡಬಹದು. ದೇಹಕ್ಕೆ ವ್ಯಾಯಾಮ ಕೊಟ್ಟಾಗ ಅದು ನೋವುವಾಗಬಹುದು, ಕಷ್ಟವಾಗಬಹುದು ಆದರೆ ಬಲಿಷ್ಟವಾಗುತ್ತದೆ. ಸರಳವಾಗಿ ರೂಪಗೊಳ್ಳುತ್ತದೆ. ದೇಹ ಮತ್ತು ಮನಸ್ಸುನ್ನು ಸುಧಾರಿಸಲು ಶ್ರಮವಹಿಸಬೇಕು.
ನಾವು ಈಗೀಗ ಬದುಕಲು ಉಸಿರಾಡುತ್ತಿದ್ದೇವೆ, ವಿನಃ ಬಲವಾಗಲು ಉಸಿರಾಡುತ್ತಿಲ್ಲವೆಂಬುವುದು ಸರಳ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು.ಜೀವನದಲ್ಲಿ ಅನೇಕ ಒತ್ತಡಗಳುಂಟು ಅವುಗಳನ್ನು ಮೀರಿ ಬದುಕಬೇಕಾದರೆ, ನಾವು ನಮ್ಮ ಉಸಿರಾಟದ ಕ್ರಮವನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು ಎಂಬುದು ಅತಿ ಸೂಕ್ಷ್ಮ ಸಂಗತಿ ನಾವು ನಿರ್ಲಕ್ಷ್ಯಿಸಬಾರದು.
The Monk who sold his Ferrari - ಫೆರಾರಿ ಮಾರಿದ ಫಕೀರ -- Robin Sharma
ಒಬ್ಬ ಆಗರ್ಭ ಶ್ರೀಮಂತ ವ್ಯಕ್ತಿ ತನ್ನ ಎಲ್ಲವನ್ನು ತೊರೆದು ಇದ್ದ ಫೆರಾರಿ ಕಾರೂ ಸಹ ಮಾರಿ ಕಣ್ಣು ಹಾಯಿಸಿದಷ್ಟು ಬಿಳಿ ಬೆಟ್ಟಗಳ ಸಾಲು ಕಾಣುವ ಹಿಮಾಲಯದ ಪಾದದಿಂದ ತನ್ನ ಪಯಣ ಶುರುವಿಟ್ಟುಕೊಳ್ಳುವ ಅವನ ಅದ್ಬುತ ಪಯಣ ನಿಜಕ್ಕೂ ರೋಮಾಂಚನಕಾರಿಯಾದದು. ಎತ್ತರೆತ್ತರದ ದೇವದಾರು ವೃಕ್ಷಗಳ ಕೆಳಗೆ ನಿಂತು ಏಕಾಂತದ ಧನ್ಯತೆ ಅನುಭವಿಸುವ ಆ ವ್ಯಕ್ತಿಯ ಸುಕ್ಕುಗಟ್ಟಿದ ಸಾವಿರರು ಪ್ರಶ್ನೆಗಳಿಗೆ ಉತ್ತರವಾಗಿ ಎದುರಾದಗುವ ನೂರಾರು ಶಿವನ ಸಾಧುಗಳು ಬದುಕುವುದನ್ನು ಬದುಕುವ ರೀತಿಯನ್ನು ಅತಿ ಸರಳ ರೀತಿಯಲ್ಲಿ ವಿವರಿಸಿ ಕಾರ್ಯ ರೂಪಕ್ಕೆ ಹೇಗೆ ತರಬೇಕೆನ್ನುವ ತಂತ್ರ ಎಲ್ಲವನ್ನು ಎಳೆ ಎಳೆಯಾಗುಲಿ ಎಳೆ ಮಗುವಿನಂತೆ ಕಲಿಯುವ ಆತನಿಗೆ ಅನಂತ ಸುಖದ ಸರಳ ಬದುಕಿನ ಸಾವಿರಾರು ಸೂತ್ರಗಳು ಸಿಗುತ್ತವೆ.
ಮತ್ತೆ ತನ್ನ ಯೌವ್ವನವನ್ನು ಅದೇ ಹಿಮಾಲಯದ ಕಂದರುಗಳಲ್ಲೆ ಮರಳಿ ಪಡೆಯುವ ಎಲ್ಲಾ ಪ್ರಯತ್ನವನ್ನು ಮಾಡಿ ಯಶಸ್ವಿಯಾಗುತ್ತಾನೆ. ಮತ್ತು ಅದು ಈ ಲೌಕಿಕ ಜಗತ್ತಿನಲ್ಲೂ ಹೇಗೆಲ್ಲಾ ಕಾರ್ಯ ರೂಪಕ್ಕೆ ತರಬಹುದು ಎಂಬ ಯೋಚನೆಗೆ ಓರೆ ಹಚ್ಚಿ ಗೆಲ್ಲುತ್ತಾನೆ. ಯೋಗಾಸಾಧನೆಯಿಂದ ಮತ್ತು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಎಷ್ಟು ಸರಳವಾಗಿ ಜೀವನವನ್ನು ನಡೆಸಬಹುದು ಎಂಬುದು ಸ್ಪಷ್ಟವಾಗಿ ಕಲಿಯುತ್ತಾನೆ.
ಅದೆಲ್ಲದರ ಒಟ್ಟು ಮೊತ್ತವೆ ಈ ಫಕಿರನ ಕತೆ! ಓದಲೇಬೇಕಾದ ಅದ್ಬುತ ಪುಸ್ತಕ!
ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...
“ಕನ್ನಡದ ಬಹುದೊಡ್ಡ ಕವಿ ದ.ರಾ. ಬೇಂದ್ರೆಯವರ ಕವಿತೆಗಳನ್ನು ಈ ಪುಸ್ತಕದಲ್ಲಿ ಆಳವಾದ ಅಧ್ಯಯನಕ್ಕೆ, ಚರ್ಚೆಗೆ ಒಳಪಡ...
"ಷರ್ಲಾಕ್ ಹೋಮ್ಸ್‌ನ ರೋಮಾಂಚಕಾರಿ ತನಿಖೆ ಮತ್ತು ಬೆಚ್ಚಿ ಬೀಳಿಸುವ ರಹಸ್ಯ ಸ್ಫೋಟ ಓದುಗರನ್ನು ತನ್ಮಯರನ್ನಾಗಿ...
©2025 Book Brahma Private Limited.