“ಒಂದೊಳ್ಳೆ ಹೋಳಿಗೆ ಊಟ ಮಾಡಿದ ಅನುಭವ. ಮಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ಹಸಿ ಬಾಣಂತಿಯ ಎಡಗೈ ತಿಂದಷ್ಟೇ ತೃಪ್ತಿ,” ಎನ್ನುತ್ತಾರೆ ಅರ್ಜುನ್ ದೇವಾಲದಕೆರೆ. ಅವರು ಗುರುರಾಜ ಕೊಡ್ಕಣಿ ಅವರ “ಅತಿಮಾನುಷ” ಕೃತಿ ಕುರಿತು ಬರೆದ ವಿಮರ್ಶೆ.
ಹಾರರ್ ಕಥೆಗಳನ್ನ ಬರೆಯುವುದೇ ಕಷ್ಟ, ಅಂತಹುದರಲ್ಲಿ, ಹಾರರ್ ಕಾದಂಬರಿ !? ಉಹು.. ಆದಷ್ಟು ಸುಲಭದ ಕೆಲಸವಲ್ಲ. ಅದಕ್ಕೊಂದು ತಯಾರಿ ಬೇಕು. ಕಟ್ಟಿಕೊಂಡ ಕ್ಯಾನ್ವಾಸ್ ಒಳಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಕೂರಿಸಬೇಕು. ಟ್ವಿಸ್ಟ್ ಅಂಡ್ ಟರ್ನ್ಸ್ ಬೇಕು. ಬೇರೆ ನಮೂನೆಯ ಪುಸ್ತಕಗಳಾದರೆ ಫೀಲ್ ಗುಡ್ ವಾಕ್ಯಗಳಿಂದ, ಉಪಮಾನ ಉಪಮೇಯ, ರೂಪಕಗಳ ಮೂಲಕ ಓದುಗನನ್ನ ಹಿಡಿದು ಕೂರಿಸಬಹುದು. ಇಲ್ಲ, ಹಾರರ್ ಕಾದಂಬರಿಯಲ್ಲಿ ಅದೆಲ್ಲ ಸಾಧ್ಯವಿಲ್ಲ. ಇಲ್ಲಿ ಓದುಗ ನಮಗಿಂತ ಉತ್ಸುಕನಾಗಿರುತ್ತಾನೆ ಮತ್ತು ಪ್ರತಿ ಪೇಜಿಗೆ ವಿಶೇಷವಾಗಿರುವುದನ್ನೇನಾದರು ಅಪೇಕ್ಷಿಸುತ್ತಾನೆ.
ಇಲ್ಲಿ ಲೇಖಕನಿಗೆ ಸ್ವಲ್ಪವಾದರೂ ಮಾಂತ್ರಿಕ ಜಗತ್ತಿನ ವಿದ್ಯೆಗಳ ಅರಿವಿರಬೇಕು. ಒಂದಷ್ಟು ರಿಸರ್ಚ್ ಬೇಕೇ ಬೇಕು. ನನ್ನ ಅತೀತ ಕಾದಂಬರಿಗಾಗಿ ಮಾಂತ್ರಿಕರನ್ನ, ಅಘೋರಿಗಳನ್ನ ಹುಡುಕಿಕೊಂಡು ನಾ ಅಲೆದ ರೀತಿ ಈಗಲೂ ನೆನಪಿದೆ. ಬಲ್ಲವನೇ ಬಲ್ಲ ಅದರ ಕಷ್ಟ. ಹೀಗಿರುವಾಗ, 200 ಪುಟಗಳ ಹಾರರ್ ಕಾದಂಬರಿ ಸುಲಭದ ಮಾತಲ್ಲ. ಅಂತಹ ಕಷ್ಟದ ಕೆಲಸವನ್ನ ಅನಾಯಾಸವಾಗಿ ಮಾಡಿ ಮುಗಿಸಿ, ಓದುಗರ ಕೈಗಿಟ್ಟು ತಣ್ಣಗೆ ಕುಳಿತಿದ್ದಾರೆ ಶ್ರೀಯುತ ಗುರುರಾಜ್ ಕೊಡ್ಕಣಿ. ನಾನು ಓದಿದ ಇವರ ಮೊದಲ ಪುಸ್ತಕ 'ಅಮಾನುಷ'. ಸಾಮಾನ್ಯವಾಗಿ ನಾನು ಓದುವಾಗ ನನ್ನೊಳಗಿರುವ ಲೇಖಕನನ್ನ ಒದ್ದು ಆಚೆ ಹಾಕಿ, ಒಬ್ಬ ಓದುಗನಾಗಿ ಓದುತ್ತೇನೆ. ನನ್ನೊಳಗಿನ ಓದುಗನನ್ನ ಸಂಪೂರ್ಣವಾಗಿ ತೃಪ್ತಿ ಪಡಿಸಿದ್ದು ಇವರು ಕಥೆ ಹೇಳಿರುವ ರೀತಿ ಮತ್ತು ಅದು ನಮ್ಮ ಮುಂದೆ ದೃಶ್ಯವಾಗಿ ತೆರೆದುಕೊಳ್ಳುವ ರೀತಿ. ಪೂರ್ವಾರ್ಧ ಕೊಂಚ ಸ್ಲೋ ಎನಿಸಿತು, ಆದರೆ ಉತ್ತರಾರ್ಧದ ವೇಗ ಮಾತ್ರ ಕ್ಲಾಸಿಕ್. ಪುಸ್ತಕ ಓದಿ ಕೆಳಗಿಟ್ಟಾಗ, ಒಂದೊಳ್ಳೆ ಹೋಳಿಗೆ ಊಟ ಮಾಡಿದ ಅನುಭವ. ಮಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ಹಸಿ ಬಾಣಂತಿಯ ಎಡಗೈ ತಿಂದಷ್ಟೇ ತೃಪ್ತಿ.
ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...
“ಕನ್ನಡದ ಬಹುದೊಡ್ಡ ಕವಿ ದ.ರಾ. ಬೇಂದ್ರೆಯವರ ಕವಿತೆಗಳನ್ನು ಈ ಪುಸ್ತಕದಲ್ಲಿ ಆಳವಾದ ಅಧ್ಯಯನಕ್ಕೆ, ಚರ್ಚೆಗೆ ಒಳಪಡ...
"ಷರ್ಲಾಕ್ ಹೋಮ್ಸ್‌ನ ರೋಮಾಂಚಕಾರಿ ತನಿಖೆ ಮತ್ತು ಬೆಚ್ಚಿ ಬೀಳಿಸುವ ರಹಸ್ಯ ಸ್ಫೋಟ ಓದುಗರನ್ನು ತನ್ಮಯರನ್ನಾಗಿ...
©2025 Book Brahma Private Limited.