“ಇಂತಹ ಹಾರರ್ ಕಥೆಯನ್ನು ಬೆಳೆಸಲು ಅವರ ನಿರೂಪಣೆಯ ಭಾಷೆ ಈ ಕಾದಂಬರಿಗೆ ಒಂದು ಘನತೆಯನ್ನು ತಂದು ಕೊಟ್ಟಿದೆ. ಅದೇ ಈ ಕೃತಿಯ ಶಕ್ತಿ. ಕಾದಂಬರಿಯ ಕ್ಲೈಮ್ಯಾಕ್ಸ್ ಅಂತೂ ಓದುಗರನ್ನು ಉಸಿರು ಬಿಗಿ ಹಿಡಿದು ಓದಿಸುವಂತೆ ಮಾಡುತ್ತದೆ,” ಎನ್ನುತ್ತಾರೆ ವಿವೇಕಾನಂದ ಕಾಮತ್ ಅವರು ಗುರುರಾಜ ಕೊಡ್ಕಣಿ ಅವರ “ಅತಿಮಾನುಷ” ಕೃತಿ ಕುರಿತು ಬರೆದ ವಿಮರ್ಶೆ.
ಸಾಮಾನ್ಯವಾಗಿ ಹಾರರ್ ವಸ್ತುಗಳು ನಾಲ್ಕೈದು ವಾಕ್ಯಗಳ ನ್ಯಾನೋ ಕಥೆಯಾಗಿಯೋ, ಅದಕ್ಕಿಂತ ಹಿರಿದು ಕಥೆಯಾಗಿಯೋ ಬರೆದು ಸಫಲವಾಗಬಹುದು. ಆದರೆ ಒಂದು ಕಾದಂಬರಿಯಾಗಿ, ಅದೂ 38 ಕಂತುಗಳಲ್ಲಿ ಹಿಡಿದಿಡುವುದು, ಪ್ರತಿ ಕಂತಿನ ಕೊನೆಯಲ್ಲಿ ಕುತೂಹಲ ಘಟ್ಟದಲ್ಲಿ ನಿಲ್ಲಿಸುವುದು, ಎಲ್ಲೂ ಸಪ್ಪೆಯೆನಿಸದೇ ಕಥೆಯನ್ನು ನಿರೂಪಿಸುವುದು, ರೋಚಕತೆಯನ್ನು ಬೆಳೆಸುತ್ತಾ ಹೋಗುವುದು ಹಾರರ್ ಕತೆಗಳಲ್ಲಿ ದೊಡ್ಡ ಸವಾಲು.
ಕನ್ನಡದಲ್ಲಿ ಇಂಥ ಪ್ರಕಾರಗಳಲ್ಲಿ ಈ ರೀತಿ ಬರೆದು ಗೆದ್ದವರು ವಿರಳ. ಗುರುರಾಜ ಕೊಡ್ಕಣಿ ಅವರ ಅತಿಮಾನುಷ ಕಾದಂಬರಿಯಲ್ಲಿ ಈ ಎಲ್ಲಾ ಆಯಾಮಗಳಲ್ಲಿ ಸೈ ಎನಿಸಿಕೊಂಡು ಗೆದ್ದಿದ್ದಾರೆ. ಅತಿಮಾನುಷ ಕಾದಂಬರಿಯ ಓದು ನಿಜಕ್ಕೂ ಖುಷಿ ನೀಡಿತು.
ಕಾದಂಬರಿಯ ಉತ್ತರಾರ್ಧವಂತೂ ಪುಸ್ತಕವನ್ನು ಕೆಳಗಿಡಲಾಗದಂತೆ , ಊಹಿಸಲಾಗದ ತಿರುವುಗಳ ಮೂಲಕ ಓದಿಸಿಕೊಂಡು ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಮೆಚ್ಚುಗೆಯಾದ ಅಂಶವೆಂದರೆ ಕೋಡ್ಕಣಿಯವರ ಭಾಷೆಯ ಮೇಲಿನ ಹಿಡಿತ. ಇಂತಹ ಹಾರರ್ ಕಥೆಯನ್ನು ಬೆಳೆಸಲು ಅವರ ನಿರೂಪಣೆಯ ಭಾಷೆ ಈ ಕಾದಂಬರಿಗೆ ಒಂದು ಘನತೆಯನ್ನು ತಂದು ಕೊಟ್ಟಿದೆ. ಅದೇ ಈ ಕೃತಿಯ ಶಕ್ತಿ. ಕಾದಂಬರಿಯ ಕ್ಲೈಮ್ಯಾಕ್ಸ್ ಅಂತೂ ಓದುಗರನ್ನು ಉಸಿರು ಬಿಗಿ ಹಿಡಿದು ಓದಿಸುವಂತೆ ಮಾಡುತ್ತದೆ. ಅದನ್ನು ಓದಿಯೇ ಅನುಭವಿಸಬೇಕು.
“ಲೇಖಕಿ ಗಾಯತ್ರಿ ಅನಂತ್ ಮಹಿಳಾ ಹಾಗೂ ಯುವ ಬರಹಗಾರರಿಗೆ ಉತ್ತೇಜನ ನೀಡುವ ಅಗತ್ಯತೆಯ ಬಗ್ಗೆ ಅರಿವು ಚೆಲ್ಲಿದ್ದಾರೆ...
“ಬರೆಹ ಸರಳವಾಗಿದೆ. ಸ್ವಾರಸ್ಯಕರವಾಗಿದೆ, ಪುಸ್ತಕದಲ್ಲಿ ಪದ-ಅಕ್ಷರಗಳ ಲೋಪಗಳಿಲ್ಲ, ಎಲ್ಲೂ ಅನಗತ್ಯವಾದ ವಿಶ್ಲೇಷಣೆ...
"ನಾಟಕದ ಬಗ್ಗೆ ಆಸಕ್ತಿ ಇರದ ಶ್ರೀಕಂಠಯ್ಯನು ಈ ಯೋಜನೆಗೆ ಒಪ್ಪಿಕೊಂಡಿರುವುದು ಸಂಗೀತ, ವೀಣಾವಾದನ ಮತ್ತು ನೃತ್ಯದಲ್ಲ...
©2025 Book Brahma Private Limited.