ಸಿ. ಪಿ. ನಾಗರಾಜ ಅವರು ಹನ್ನೆರಡನೆಯ ಶತಮಾನದ ಶಿವಶರಣಶರಣೆಯರ ವಚನಗಳಿಂದ ಆಯ್ದು ಪ್ರಕಟಿಸುತ್ತಿರುವ ಕೃತಿ 'ವಚನಗಳ ಓದು'. ಈ ಸಂಕಲನವನ್ನು ಓದುವಾಗ, ವಚನಗಳೆಲ್ಲಾ ಏನೋ ಕಿವಿಗೆ ಇಂಪಾದ, ಬುದ್ಧಿಗೆ ಚುರುಕನ್ನು ನೀಡುವ ಸುಭಾಷಿತಗಳೆಂದಷ್ಟೇ ನೋಡಬಾರದೆಂಬುದು ಸಿ. ಪಿ. ನಾಗರಾಜ ಅವರ ಆಶಯವಾಗಿದೆ. ವಚನಗಳಲ್ಲಿ ಸುಭಾಷಿತಗಳು ವಿಫುಲವಾಗಿವೆ, ಸೊಗಸಾಗಿವೆ. ಆದರೆ ಮನಸ್ಸಿಗೆ ಆಹ್ಲಾದ ನೀಡಿ ಮುಕ್ತಾಯವಾಗುವ ಕಾವ್ಯದ ಪರಿ ವಚನಗಳದ್ದಲ್ಲ. ಅವು ಪ್ರಾಯೋಗಿಕ ಜಗತ್ತಿನ ತಿಳಿವಳಿಕೆ ಮತ್ತು ಮುಲಾಮು. ಎರಡಕ್ಕೂ ಸಿದ್ಧಷಧ. ಇಂತಹ ಪ್ರಚೋದನಾತ್ಮಕ ಮತ್ತು ಪ್ರಯೋಜನಕಾರಿ ಕೃತಿಯೊಂದನ್ನು ರಚಿಸಿ ಹೊರತಂದಿದ್ದಾರೆ ಲೇಖಕರು.
©2025 Book Brahma Private Limited.