ವಚನಧಾರೆ

Author : ಎನ್.ಸಿ.ಸುಂದರರಾಜ ರಾವ್

Pages 260

₹ 300.00




Year of Publication: 2022
Published by: ನಿವೇದಿತ ಪ್ರಕಾಶನ
Address: ನಂ.3437 , 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 9448733323

Synopsys

'ವಚನಾಧಾರೆ' ಲೇಖಕ ಎನ್.ಸಿ.ಸುಂದರರಾಜ ರಾವ್ ಅವರ ವಚನಗಳ ಸಂಕಲನ. ಈ ಸಂಕಲನದಲ್ಲಿ ಆರುನೂರು ವಚನಗಳಿವೆ. ಇವನ್ನು ಅವರು ಒಂದು ವ್ರತದಂತೆ ನಿತ್ಯ ಒಂದು ವಚನವನ್ನು ಆರುನೂರು ದಿನಗಳ ಕಾಲ ರಚಿಸಿ ಪುಸ್ತಕ ರೂಪದಲ್ಲಿ ಸಂಕಲಿಸಿ ಓದುಗರ ಕೈಗೆ ಇತ್ತಿದ್ದಾರೆ. ಇವರ ಈ ವಚನ ಸಂಕಲನದಲ್ಲಿ ನಾನಾ ವಿಷಯಗಳು ಅಡಕವಾಗಿದೆ.ಮುಖ್ಯವಾಗಿ ದೈವಭಕ್ತಿ, ಕುಟುಂಬ, ಸಮಾಜ, ಪತಿಪತ್ನಿ ಬಾಂಧವ್ಯ, ರಾಜಕೀಯ ಭ್ರಷ್ಟಾಚಾರಗಳು, ರೋಗ, ಹಸಿವು, ಸ್ವಯಂಘೋಷಿತ ಬುದ್ಧಿಜೀವಿಗಳು, ಹೀಗೆ ಹಲವು ಅಂಶಗಳನ್ನು ಒಳಗೊಂಡ ಈ ವಚನ ಸಂಕಲನ ವೈವಿಧ್ಯಪೂರ್ಣವೂ.

About the Author

ಎನ್.ಸಿ.ಸುಂದರರಾಜ ರಾವ್

ಲೇಖಕ ಎನ್.ಸಿ.ಸುಂದರರಾಜ ರಾವ್ 1944 ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೋದಿಗೆರೆ ಗ್ರಾಮದಲ್ಲಿ ಜನನ. ತಂದೆ ಚಂದ್ರಶೇಖರಯ್ಯ ತಾಯಿ ನಾಗರತ್ನಮ್ಮ ಹೋದಿಗೆರೆ .ಮೂಲತಃ ತುಮಕೂರು ನಿವಾಸಿಯಾಗಿದ್ದು ವೃತ್ತಿಯಲ್ಲಿ ಇಂಜನಿಯರ್ ಆಗಿ ನಿವೃತ್ತರಾಗಿದ್ದಾರೆ.. ಲೋಕೋಪಯೋಗಿ ಇಲಾಖೆಯಲ್ಲಿ ಮೂವ್ವತ್ತೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಅನೇಕ ಸಮಾಜ ಕಲ್ಯಾಣ ಕಾರ್ಯಗಳನ್ನು ನಿರ್ವಹಿಸಿ ಕೀರ್ತಿಶೇಷರಾಗಿದ್ದಾರೆ. ಓದಿದ್ದು ಇಂಜಿನಿಯರಿಂಗ್ ಆಗಿದ್ದರೂ, ಇಂಜಿನಿಯರ್ ವೃತ್ತಿಯನ್ನೇ ಕೈಗೊಂಡಿದ್ದರೂ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಕನ್ನಡದಲ್ಲಿ ಎಂ.ಎ. ಅಧ್ಯಯನ ಮಾಡಿದ್ದಾರೆ. ವಿದ್ಯಾರ್ಥಿ ದೆಶೆಯಲ್ಲಿದ್ದಾಗ ವಾರ್ಷಿಕ ಸಂಚಿಕೆಗೆ ಅವರೇ ಬರೆದ ಒಂದು ಕವಿತೆ ಅಚಾನಕ್ ಆಗಿ ಕಣ್ಣಿಗೆ ...

READ MORE

Related Books