ಕೃಷ್ಣಕವಿ (ಕೃಷ್ಣಮೂರ್ತಿ.ಎಸ್) ಅವರ ಮುಕ್ತಕಗಳ ಸಂಗ್ರಹ ಸ್ವಾತಿ ಮುತ್ತುಗಳು. ಕೃತಿಯ ಮುನ್ನುಡಿಯಲ್ಲಿ ಕೆ.ರಾಜಕುಮಾರ್ ಅವರು ಹೇಳಿರುವಂತೆ, ಕೃಷ್ಣಕವಿಯವರು ಮುಕ್ತಕಗಳ ಮೂಲಕ ಆದರ್ಶವನ್ನು ಪ್ರತಿಪಾದಿಸಿದ್ದಾರೆ. ಸಮಾಜವನ್ನು ತಿದ್ದಲು, ಶುಚಿಗೊಳಿಸಲು ಅವರು ಮುಕ್ತಕಗಳೆಂಬ ಬಾಣಗಳನ್ನು ಪ್ರಯೋಗಿಸಿದ್ದಾರೆ. ಅವರು ಮುಕ್ತಕಗಳಿಗೆ 'ಸ್ವಚ್ಛಕ' ಗುಣವನ್ನು ಲೇಪಿಸಿದ್ದಾರೆ. ಹಾಗಾಗಿ ಅವುಗಳ ರಚನೆಯಲ್ಲಿ ಅವರಿಗಿರುವ ಸದುದ್ದೇಶವನ್ನು ಗಮನಿಸಬಹುದು. ಸಮಾಜದ, ಸಮೂಹದ ಆಮಿಷಗಳಿಗೆ, ಆವೇಗಕ್ಕೆ ಒಂದು ನೈತಿಕ ಅಂಕುಶವನ್ನು ಹಾಕಲು ಯತ್ನಿಸಿದ್ದಾರೆ ಎಂದಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ಲೇಖಕ ಮತ್ತು ಚಿಂತಕ ರಾ.ವೆಂಕಟೇಶ ಶೆಟ್ಟಿ ಅವರು ಬರೆದಿರುವಂತೆ, ಮುಕ್ತಕ ಎಂಬ ಮಾಂತ್ರಿಕ ತನ್ನ ಕೃಚಳಕ ತೋರುತ್ತಿದ್ದಾನೆ. ಮುಕ್ತಕಗಳ ಬಳ್ಳಿ ಪರಿವಾರದಲ್ಲಿ ಫಲಬಿಟ್ಟು ಕಂಗೊಳಿಸುತ್ತಿದೆ. ರೆಂಬೆ ಕೊಂಬೆಗಳು ಸೇರಿಕೊಳ್ಳುತ್ತಿವೆ. ಹಳ್ಳದ ದಂಡೆಯ ಕರಿಕೆಯ ಕುಡಿಯಂತೆ ಮುಕ್ತಕದ ರಸಬಳ್ಳಿ ಹಬ್ಬುತಿದೆ. ಕೃಷ್ಣಕವಿಗಳಂತೂ ಮುಕ್ತಕ ಸಾಮ್ರಾಟರೇ ಆಗಿದ್ದಾರೆ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.