ಶರೀಫರು ರಚಿಸಿದ ತತ್ವಪದಗಳ ಪೈಕಿ ಕೆಲವೊಂದನ್ನು ಆಯ್ದು ಲೇಖಕ ದಾವಲಸಾಬ ನರಗುಂದ ಅವರು ಸಂಪಾದಿಸಿದ ಕೃತಿ-ತೂಗುತಿದೆ ನಿಜ ಬಯಲಲಿ. ಶಿಶುನಾಳ ಶರೀಫರು ತತ್ವಪದಕಾರರು. ಗುರು ಗೋವಿಂದ ಭಟ್ಟರ ಆಪ್ತ ಶಿಷ್ಯರಾಗಿ ತತ್ವಜ್ಞಾನದ ಔನ್ನತ್ಯವನ್ನು ಸಾಧಿಸಿದವರು. ಇವರ ತತ್ವಪದಗಳು ಧರ್ಮ ಸಾಮರಸ್ಯವನ್ನು, ಬದುಕಿನ ಸಾರ್ಥಕತೆಯನ್ನು ಸಾರುತ್ತವೆ. ಮನುಷ್ಯನ ಟೊಳ್ಳುತನ, ಬಡಿವಾರವನ್ನು, ಸೋಗಲಾಡಿತನವನ್ನು ಖಂಡಿಸುತ್ತವೆ. ಮಾನವೀಯ ಸಂವೇದನೆಯ ಇಂತಹ ತತ್ವಪದಗಳ ಆಶಯವು ಮನುಕುಲದ ಉತ್ತಮ ವಿಕಾಸವೇ ಆಗಿದೆ. ವಿದ್ಯಾರ್ಥಿ-ಬೋಧಕರಿಗೂ ಮಾತ್ರವಲ್ಲ; ಸಾಮಾನ್ಯ ಓದುಗರಿಗೂ ಈ ಕೃತಿ ಉಪಯುಕ್ತವಾಗಿದೆ.
©2025 Book Brahma Private Limited.