‘ಕಡಕೋಳ ಮಡಿವಾಳಪ್ಪನವರ ಸಾಹಿತ್ಯ’ ಲೇಖಕ ಡಾ.ಬಸವರಾಜ ಸಬರದ ಅವರ ಕೃತಿ. ಕಡಕೋಳ ಮಡಿವಾಳಪ್ಪನವರನ್ನು ಕುರಿತು ಈಗಾಗಲೇ ಅನೇಕ ಕೃತಿಗಳು ಪ್ರಕಟವಾಗಿವೆ. ಆದರೆ ಈ ಚಿಕ್ಕ ಕೃತಿ ವಿಶಿಷ್ಟವಾದುದಾಗಿದೆ. ಇಲ್ಲಿ ಮಡಿವಾಳಪ್ಪನವರ ವಚನ ಹಾಗೂ ಸ್ವರವಚನ ಎರಡೂ ಪ್ರಕಾರಗಳನ್ನು ಕುರಿತು ಅಂದರೆ ಅವರ ಇಡೀ ಸಾಹಿತ್ಯದ ಸಾರವನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ ಎಂದಿದ್ದಾರೆ ಲೇಖಕ ಬಸವರಾಜ ಸಬರದ. ಈ ಕೃತಿಯಲ್ಲಿ ಕುಲಪತಿಗಳ ನುಡಿ, ನಿರ್ದೇಶಕರ ನುಡಿ, ಲೇಖಕರ ನುಡಿಯೊಂದಿಗೆ ಜನನ-ಬಾಲ್ಯ, ಶಿಷ್ಯ ಪರಂಪರೆ, ಸಾಹಿತ್ಯರಚನೆ, ಗುರು-ಲಿಂಗ- ಜಂಗಮ, ಆತ್ಮನಿವೇದನೆ, ಸತಿಪತಿಭಾವ, ಅನುಭಾವ, ಸಾಮಾಜಿಕ ವಿಡಂಬನೆ, ಸಂದೇಶ ಹಾಗೂ ಸಮಾರೋಪ ಲೇಖನಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.