`ಕೊಪ್ಪಳ ಜಿಲ್ಲೆಯ ಆಯ್ದ ತತ್ವಪದಗಳು’ ವೆಂಕಟೇಶ್ ಎಚ್ ಹಾಗೂ ಡಾ. ಯಮನೂರಪ್ಪ ವಡಕಿ ಅವರ ಸಂಗ್ರಹ ಕೃತಿಯಾಗಿದೆ.ಸುಮಾರು ಇಪ್ಪತ್ತೊಂದು ತತ್ವಪದಕಾರರ ಕೆಲವು ತತ್ವಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೊಪ್ಪಳ ಪರಿಸರಪೌರಾಣಿಕ ಮತ್ತು ಇತಿಹಾಸಿಕ ಹಿನ್ನಲೆಯುಳ್ಳದ್ದು. ಬುದ್ಧತತ್ವದ ಸಿದ್ಧಪರಂಪರೆಮತ್ತು ಅವಧೂತ ಪರಂಪರೆಯೂ ಇದೆ. ಕರ್ನಾಟಕದಲ್ಲಿ ಅವಧೂತ ಪರಂಪರೆಗೆ ಒಂದು ಮಹತ್ವ ಸಿಕ್ಕಿದ್ದು ಚಿದಾನಂದವಧೂತರಿಂದ. ಹಾಗೆ ಹೇರೂರು ವಿರುಪಾವಧೂತರು ಸಾಧನೆಯಿಂದ ಸಿದ್ಧಿಗಳಿಸಿದವರು. ಆ ಪರಂಪರೆಯ ಅನೇಕರುಈ ಮಾರ್ಗದಲ್ಲಿ ನಡೆದಿದ್ದಾರೆ. ಅವರು ರಚಿಸಿದ ತತ್ವಗಳನ್ನು ಹಾಡುವವರಿದ್ದಾರೆ. ಆ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗೆ ಕಾರಣೀಕೃತರಾಗಿದ್ದಾರೆ. ಚಿದಾನಂದವಧೂತರು ಕರ್ನಾಟಕದಾದ್ಯಂತ ಮನೆಮಾತಾಗಿರುವ ಅವಧೂತ. ಬಗಳಾಂಬಿಕಾ ದೇವಿಯ ಆರಾಧಕರಾಗಿದ್ದು, ಶ್ರೀದೇವಿ ಮಹಾತ್ಮೆ ಎನ್ನುವ ಕೃತಿ ಕನ್ನಡಿಗರ ಮನೆ ಮತ್ತು ಮನವನ್ನು ಮುಟ್ಟಿ ಆರಾಧನೆಗೊಳ್ಳುತ್ತಿರುವ ಗ್ರಂಥ. ಅವರ ತತ್ವಗಳು ಮನಷ್ಯನ ಅನುಭಾವದ ಶಕ್ತಿಯನ್ನು ಜಾಗೃತಗೊಳಿಸುವ ಅರಿವನ್ನು ಪಡೆದಿವೆ. ಕಾಣೆನೋ ಜನರನು ಯಡ್ಡೆ,ಸಾರ್ಥಕವಾಗುವ ಮಾರ್ಗ ಕಾಣಲಿಲ್ಲ ನರಜನ್ಮಕೆ ಬಂದು ಗೊಡ್ಡೆ. ಹೀಗೆ ಸಮಾಜವನ್ನು ಎಚ್ಚರಿಸುವ ರಚನೆಗಳು ಸಾರ್ವಾಕಾಲಿಕ ಗುಣಗಳನ್ನು ಪಡೆದಿವೆ.ಒಂಬತ್ತು ತೂತಿಗೊಳುಗಿಂಭದಿ ಮುಳುಗದೆ, ಅಂಬರಕ್ಕೆತ್ತಿದು ಒಬ್ಬರಿಗೆ ನದರಿಲ್ಲ. ಕುಂಭಿನಿಯೊಳು ಸಂಭ್ರಮದಿಂದ ಬಂದು ಹಂಬಲಿಸುತಲಿದೆ ಎದುರಿಲ್ಲ. ಎನ್ನುವ ಹೇರೂರು ವಿರೂಪಣ್ಣತಾತನವರ ರಚನೆಯೂ ಸಹ ಬದುಕಿನ ಮಹತ್ವವನ್ನುಬೋಧಿಸುತ್ತದೆ. ಮೌಖಿಕ ಪರಂಪರೆಯಲ್ಲಿಯೇ ಸಾಗಿಬಂದ ಇಲ್ಲಿನ ಹಲವಾರು ತತ್ವಪದಕಾರರ ತತ್ವಗಳು ಈ ಹೊತ್ತು ವಿಶ್ವವಿದ್ಯಾನಿಲಯಗಳ ಅಧ್ಯಯನ ವಸ್ತುಗಳಾಗಿವೆ. ವಿದ್ವಾಂಸರ ಆಸಕ್ತಿ ವಿಷಯಗಳಾಗಿವೆ. ಸಮಕಾಲೀನ ಸಂದರ್ಭಕ್ಕೆ ಮುಖಾಮುಖಿಯಾಗುವ ಹಲವಾರು ವಿಚಾರಗಳು ಇಲ್ಲಿನ ತತ್ವಪದಗಳಲ್ಲಿವೆ.
ಕೊಪ್ಪಳ ಜಿಲ್ಲೆಯ ಆಯ್ದ ತತ್ವಪದಗಳನ್ನು ಗೆಳೆಯರಾದ ಡಾ.ವೆಂಕಟೇಶ್‌ಮತ್ತು ಡಾ.ಯಮನೂರಪ್ಪ ವಡಕಿ ಕೂಡಿ ಸಂಗ್ರಹಿಸಿದ್ದಾರೆ. ಸುಮಾರು ಇಪ್ಪತ್ತೊಂದು ತತ್ವಪದಕಾರರ ಕೆಲವು ತತ್ವಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೊಪ್ಪಳ ಪರಿಸರಪೌರಾಣಿಕ ಮತ್ತು ಇತಿಹಾಸಿಕ ಹಿನ್ನಲೆಯುಳ್ಳದ್ದು. ಬುದ್ಧತತ್ವದ ಸಿದ್ಧಪರಂಪರೆಮತ್ತು ಅವಧೂತ ಪರಂಪರೆಯೂ ಇದೆ. ಕರ್ನಾಟಕದಲ್ಲಿ ಅವಧೂತ ಪರಂಪರೆಗೆಒAದು ಮಹತ್ವ ಸಿಕ್ಕಿದ್ದು ಚಿದಾನಂದವಧೂತರಿAದ. ಹಾಗೆ ಹೇರೂರುವಿರುಪಾವಧೂತರು ಸಾಧನೆಯಿಂದ ಸಿದ್ಧಿಗಳಿಸಿದವರು. ಆ ಪರಂಪರೆಯ ಅನೇಕರುಈ ಮಾರ್ಗದಲ್ಲಿ ನಡೆದಿದ್ದಾರೆ. ಅವರು ರಚಿಸಿದ ತತ್ವಗಳನ್ನು ಹಾಡುವವರಿದ್ದಾರೆ.ಆ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗೆಕಾರಣೀಕೃತರಾಗಿದ್ದಾರೆ. ಚಿದಾನಂದವಧೂತರು ಕರ್ನಾಟಕದಾದ್ಯಂತ ಮನೆಮಾತಾಗಿರುವ ಅವಧೂತ. ಬಗಳಾಂಬಿಕಾ ದೇವಿಯ ಆರಾಧಕರಾಗಿದ್ದು, ಶ್ರೀದೇವಿ ಮಹಾತ್ಮೆ ಎನ್ನುವ ಕೃತಿ ಕನ್ನಡಿಗರ ಮನೆ ಮತ್ತು ಮನವನ್ನು ಮುಟ್ಟಿಆರಾಧನೆಗೊಳ್ಳುತ್ತಿರುವ ಗ್ರಂಥ. ಅವರ ತತ್ವಗಳು ಮನಷ್ಯನ ಅನುಭಾವದ ಶಕ್ತಿಯನ್ನು ಜಾಗೃತಗೊಳಿಸುವ ಅರಿವನ್ನು ಪಡೆದಿವೆ. ಕಾಣೆನೋ ಜನರನು ಯಡ್ಡೆ,ಸಾರ್ಥಕವಾಗುವ ಮಾರ್ಗ ಕಾಣಲಿಲ್ಲ ನರಜನ್ಮಕೆ ಬಂದು ಗೊಡ್ಡೆ. ಹೀಗೆಸಮಾಜವನ್ನು ಎಚ್ಚರಿಸುವ ರಚನೆಗಳು ಸಾರ್ವಾಕಾಲಿಕ ಗುಣಗಳನ್ನು ಪಡೆದಿವೆ.ಒಂಬತ್ತು ತೂತಿಗೊಳುಗಿಂಭದಿ ಮುಳುಗದೆ, ಅಂಬರಕ್ಕೆತ್ತಿದು ಒಬ್ಬರಿಗೆ ನದರಿಲ್ಲ.ಕುಂಭಿನಿಯೊಳು ಸಂಭ್ರಮದಿAದ ಬಂದು ಹಂಬಲಿಸುತಲಿದೆ ಎದುರಿಲ್ಲ. ಎನ್ನುವ ಹೇರೂರು ವಿರೂಪಣ್ಣತಾತನವರ ರಚನೆಯೂ ಸಹ ಬದುಕಿನ ಮಹತ್ವವನ್ನುಬೋಧಿಸುತ್ತದೆ. ಮೌಖಿಕ ಪರಂಪರೆಯಲ್ಲಿಯೇ ಸಾಗಿಬಂದ ಇಲ್ಲಿನ ಹಲವಾರುತತ್ವಪದಕಾರರ ತತ್ವಗಳು ಈ ಹೊತ್ತು ವಿಶ್ವವಿದ್ಯಾನಿಲಯಗಳ ಅಧ್ಯಯನವಸ್ತುಗಳಾಗಿವೆ. ವಿದ್ವಾಂಸರ ಆಸಕ್ತಿ ವಿಷಯಗಳಾಗಿವೆ. ಸಮಕಾಲೀನ ಸಂದರ್ಭಕ್ಕೆಮುಖಾಮುಖಿಯಾಗುವ ಹಲವಾರು ವಿಚಾರಗಳು ಇಲ್ಲಿನ ತತ್ವಪದಗಳಲ್ಲಿವೆ.ಜಾತಿ ಮತ ಧರ್ಮಗಳ ಎಲ್ಲೆಯನ್ನು ಮೀರಿ ಮಾನವ ಧರ್ಮದ ಮಹತ್ವಸಾರುವ ಆ ಮೂಲಕ ಸಾಮರಸ್ಯ ಮತ್ತು ಸೌಹಾರ್ದತೆ ಪ್ರತಿಪಾದಿಸಿ ಮಾನವ ಬಂಧುತ್ವವನ್ನು ಕಟ್ಟುವ ಚಿಂತನೆಗಳು ನಡೆಯುವಂತಾಗಲಿ ಎಂದು ಆಶಿಸುತ್ತೇನೆ. ಪ್ರೊ. ಜೆ ಕರಿಯಪ್ಪ ಮಾಳಿಗೆ ಚಿತ್ರದುರ್ಗ
©2025 Book Brahma Private Limited.