ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ರಚಿಸಿದ ಕೃತಿ-ಸೂಕ್ತಿ ಸುಧೆ. 261 ಸೂಕ್ತಿಗಳನ್ನು ಒಳಗೊಂಗೊಂಡಿರುವ ಕೃತಿ. ನೊಂದು-ಬೆಂದದವರ ಬದುಕು ಬರಿದಾಯಿತೆಂದು ಚಿಂತಿಸುವವರಿಗೆ ಈ ಕೃತಿಯು ಸಂಜೀವಿನಿಯಂತೆ, ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ. ಸಮಾಜದ ಓರೆ-ಕೋರೆಗಳನ್ನು ಹಾಗೂ ಜನಸಾಮಾನ್ಯರ ರೀತಿ-ನೀತಿಗಳನ್ನು ತಿದ್ದುವ ದಾರಿ ತಪ್ಪುತ್ತಿರುವ ಯುವ ಜನತೆಯನ್ನು ಸರಿದಾರಿಗೆ ತರುವ ಸೂಕ್ತಿಗಳು ಇಲ್ಲಿವೆ. ಮಹಿಳೆಯರು ಮಕ್ಕಳು ಮತ್ತು ಪುರುಷರಿಗೆ ಸಂಸ್ಕಾರ-ಸಂಸ್ಕೃತಿ ನಮೂದಿಸುವ ಸೂಕ್ತಿಗಳು ಹೇರಳ. ಮುಕ್ತಿ ಸಾಧನೆಗೆ ಶ್ರೀಗುರುವಿನ ಕೃಪೆಯ ಅವಶ್ಯಕತೆಯನ್ನು ಸೂಕ್ತಿಗಳು ಸೂಚಿಸುತ್ತವೆ. ನಾನು, ನನ್ನದು ಎನ್ನದೇ ಎಲ್ಲವೂ ಮಹಾದೇವನದು ಎನ್ನುವ ತಾತ್ವಿಕ ಚಿಂತನೆಯ ಸೂಕ್ತಿಗಳನ್ನು ಕಾಣಬಹುದು. ಪರಿಸರ ರಕ್ಷಣೆ, ಶಿಕ್ಷಣ, ಸಾಹಿತ್ಯ, ಸ್ವಚ್ಛತೆಯ ಅರಿವಿನ ಮತ್ತು ದೇಶಭಕ್ತಿಯ ಸೂಕ್ತಿಗಳಿರುವುದು ಗಮನಾರ್ಹ. ಜನಸಾಮಾನ್ಯರು ಆಡುವ ಭಾಷೆಯಲ್ಲಿ ಸೂಕ್ತಿಗಳು ರಚನೆಗೊಂಡಿವೆ. ಕೃಷಿ,ಕಾಯಕ, ಶೈಕ್ಷಣಿಕ, ಸಾಹಿತಿಕ, ಸಾಂಸ್ಕೃತಿಕ ಕೃತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರ ನಡೆ-ನುಡಿಗಳು ಸಮಸ್ತ ಸದ್ಭಕ್ತರ ಮೆಚ್ಚುಗೆಗೆ ಪಾತ್ರವಾಗಿದ್ದು,ಇವರ ಯುಕ್ತಿಯ ಸೂಕ್ತಿಗಳು ಜನಸಾಮಾನ್ಯರಿಗೆ ಪ್ರೇರಣಾದಾಯಕ ಹಾಗೂ ಸತ್ಯದ ಖಣಿಗಳಾಗಿವೆ.
©2024 Book Brahma Private Limited.