ಹಿರಿಯ ಸಾಹಿತಿ ಎಸ್. ರಾಮಸ್ವಾಮಿ ಅವರು ಸಂಗ್ರಹಿಸಿದ ಸೂಕ್ತಿ ಹಾಗೂ ಸುಭಾಷಿತಗಳನ್ನು ಹಿರಿಯ ಸಾಹಿತಿ ನೀಲತ್ತಹಳ್ಳಿ ಕಸ್ತೂರಿ ಅವರು ಅನುವಾದಿಸಿದ ಕೃತಿ-ಸಂಸ್ಕೃತಿ. ಇದು ವಿಸ್ತೃತ ಆವೃತ್ತಿ. ಪ್ರಾಚೀನ ಕಾಲದಿಂದ ಹಿಡಿದು ಆರ್ವಾಚೀನ ಕಾಲದವರೆಗೆ ಮತ್ತು ಪಾಶ್ಚಾತ್ಯದಿಂದ ಹಿಡಿದು ಪೌರ್ವಾತ್ಯದವರೆಗೆ ಅತಿ ಮಹತ್ವದ ಸೂಕ್ತಿಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ತಮ್ಮನ್ನು ಒಳಗೊಂಡಂತೆ ವಿದ್ವಾನ್ ಎನ್. ರಂಗನಾಥ ಶರ್ಮ, ಡಾ. ಎಸ್.ಕೆ. ರಾಮಚಂದ್ರರಾವ್, ಶತಾವಧಾನಿ ಆರ್. ಗಣೇಶ್, ಡಾ. ಸಿದ್ಧಯ್ಯ ಪುರಾಣಿಕ, ಡಾ. ಎಲ್.ಎಸ್. ಶೇಷಗಿರಿರಾವ್ ಇತರೆ ಗಣ್ಯರು ಸಂಗ್ರಹಿಸಿ ನೀಡಿದ್ದ ಸೂಕ್ತಿಗಳನ್ನು ನೀಡಲಾಗಿದೆ. ಈ ಕೃತಿಯು ಓದುಗ ಆಸಕ್ತರಿಗೆ ಉತ್ತಮ ಮಾರ್ಗದರ್ಶಿಯೂ, ಜ್ಞಾನಬೋಧೆಯೂ ಆಗಿದೆ.
©2025 Book Brahma Private Limited.