ಲೇಖಕ ಸಂಪಟೂರು ವಿಶ್ವನಾಥ ಅವರ ಕೃತಿ-ಭಾರತದ ಸುಭಾಷಿತಗಳು. ಅಧ್ಯಾತ್ಮಿಕವಾಗಿ ಮಹತ್ವದ ಚಿಂತನೆಗಳನ್ನು ಒಳಗೊಂಡ ಸುಮಾರು 1900 ವಿಚಾರಗಳ ಸಾರವನ್ನು ನೀಡಿದ್ದು ಈ ಕೃತಿಯ ವೈಶಿಷ್ಟ್ಯ. ದಿನಕ್ಕೊಂದು ಸುಭಾಷಿತಗಳನ್ನು ಓದಿದರೂ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಮೂಲಕ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಬಹುದು ಎಂಬಷ್ಟು ಪರಿಣಾಮಕಾರಿಯಾದ ಚಿಂತನೆಗಳನ್ನು ಇಲ್ಲಿ ಸಂಗ್ರಹಿಸಿ, ಸಂಪಾದಿಸಿ, ನೀಡಲಾಗಿದೆ. ಸುಭಾಷಿತಗಳು ಮನಸ್ಸಿನ ಉತ್ತಮ ಸಂಸ್ಕಾರಕ್ಕೆ ಪ್ರೇರಣೆ ನೀಡುತ್ತವೆ. ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಮನೋಸ್ಥೈರ್ಯ ನೀಡುತ್ತವೆ. ಮನುಷ್ಯನ ಪ್ರಯತ್ನ ಮೀರಿದ ಅಂತಹ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಸೂಕ್ಷ್ಮ ಒಳನೋಟಗಳನ್ನು ಇಲ್ಲಿಯ ಚಿಂತನೆಗಳು ನೀಡುತ್ತವೆ. ಈ ನಿಟ್ಟಿನಲ್ಲಿ, ಈ ಕೃತಿಯು ಮಹತ್ವ ಪಡೆಯುತ್ತದೆ.
©2025 Book Brahma Private Limited.