ಇದು ಬಾಲಕೃಷ್ಣ ಅವರ ವಿಜ್ಞಾನ ಲೇಖನಗಳ ಸಂಕಲನ. ’ವಿಜ್ಞಾನದಲ್ಲಿ ರಹಸ್ಯ ಬಗೆದಷ್ಟೂ ನಿಗೂಢವಾಗುತ್ತದೆ ಆದ್ದರಿಂದಲೇ ಇಲ್ಲಿನ ಪ್ರತೀ ಪ್ರಬಂಧದಲ್ಲಿಯೂ ತನ್ನದೇ ಅವಲೋಕನೆಯತ್ತ ನೂಕಿ, ಆ ಪ್ರಬಂಧ ರಚನೆಯಲ್ಲಿಯೇ ತಾನೂ ಒಂದು ಪಾತ್ರವಾಗುವಂತೆ ಪ್ರೇರೆಪಿಸುತ್ತಾರೆ. ಇದು ಬಾಲು ಅವರ ಲೇಖನಗಳ ಅನನ್ಯತೆ’ ಎನ್ನುವುದು ಸೃಜನಶೀಲ ವೈಜ್ಞಾನಿಕ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಡಾ.ಕೆ.ಎನ್.ಗಣೇಶಯ್ಯನವರ ಅಭಿಪ್ರಾಯ.
ಪ್ರೊ.ವಿ.ಚಂದ್ರಶೇಖರ ನಂಗಲಿ ಅವರ ಪ್ರಕಾರ ಮಾನವ ಕೇಂದ್ರಿತವಾದ ಎಲ್ಲ ಬಗೆಯ ರಚನೆಗಳನ್ನು ನಿರಾಕರಿಸುತ್ತಾ ಉಳ್ಳವರು ಹುಟ್ಟುಹಾಕಿದ ಸುಳ್ಳು ಸೃಷ್ಠಿಯ ‘ಸಚರಾಚರವೆಲ್ಲ’ ರಚನೆಗೆ ಬಾರದಿರುವ ನೆಲೆಗೆ ನಮ್ಮನ್ನು ಕರೆದೊಯ್ಯುವ ಇಲ್ಲಿನ ಬರಹಗಳು ಅಪರಿಮಿತದ ಕತ್ತಲೆಯೊಳಗೆ ಈಜುತ್ತಿರುವ ವಿಪರೀತದ ಬೆಳಕಿನ ಹುಳುಗಳಾಗಿ ಕಾಣುತ್ತದೆ.
©2025 Book Brahma Private Limited.