ಈ ಕೃತಿಯಲ್ಲಿ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನು ವೈವಿಧ್ಯಮಯವಾದ ದೃಷ್ಟಿಕೋನದೊಂದಿಗೆ ಲೇಖಕ ಕೆ. ಪುಟ್ಟಸ್ವಾಮಿ ದಿಗ್ದರ್ಶನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ಪ್ರಮುಖ ಪಾತ್ರ ವಹಿಸಿದರು ಎಂಬ ಹಲವು ಅಣೆಪಟ್ಟಿಗಳನ್ನು ಬೇರೊಂದು ದೃಷ್ಟಿಕೋನದ ಮೂಲಕ ಓದುಗರಿಗೆ ಮನವರಿಕೆ ಮಾಡುವಲ್ಲಿ ಈ ಕೃತಿಯೂ ಸರಿಯೆನಿಸಿದೆ. ಆರಂಭದಿಂದಲೂ ಆಧುನಿಕತೆಯನ್ನು ವಿರೋಧಿಸುತ್ತಾ ಬಂದಿದ್ದ ಗಾಂಧೀಜಿ ಅವರು ಇದರಿಂದ ದೇಶಕ್ಕೆ ಹಲವು ನಷ್ಟವಾಗಲಿದೆ ಎಂದು ಮನಗಂಡು , ಅದನ್ನು ವಿರೋಧಿಸುತ್ತಾ ಬಂದಿದ್ದರು. ಗ್ರಾಮ ಸ್ವರಾಜ್ಯ ಗಾಂಧಿಯವರ ಕಲ್ಪನೆ, ವಿದೇಶಿ ವಸ್ತುಗಳಿಗೆ ಬಹಿಷ್ಕರಿಸಿ ,ದೇಶಿಯ ವಸ್ತುಗಳಿಗೆ ಆದ್ಯತೆ ನೀಡಿದ ಗಾಂಧಿಯವರ ಮರ್ಮ, ಇದರ ಮೂಲಕ ತಮ್ಮ ವೈಯುಕ್ತಿಕತೆಯನ್ನು, ಸ್ವಾಭಿಮಾನವನ್ನು , ನೆಲೆಗೊಳಿಸಲು ಯತ್ನಿಸಿದ ಬಗೆ ಎಲ್ಲವನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಆಧುನಿಕತೆಯನ್ನು ವಿರೋಧಿಸುತ್ತಾ ಬಂದಿದ್ದ ಗಾಂಧಿಯವರು ತಮ್ಮ ಜೀವವನ್ನು ಯಾವ ರೀತಿಯಲ್ಲಿ ವೈಜ್ಞಾನಿಕತೆಗೆ ಪ್ರಭಾವಕ್ಕೆ ಒಳಪಟ್ಟಿತ್ತು ಎಂಬುದನ್ನು ಈ ಕೃತಿಯೂ ವಿವರಿಸುತ್ತದೆ.
©2024 Book Brahma Private Limited.