ಎದ್ದೇಳು ಭಾರತೀಯ

Author : ಜಿ.ಬಿ. ಹರೀಶ

Pages 60

₹ 60.00




Year of Publication: 2023
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

ಭಗವಾನ್ ಬುದ್ಧನ ಧಮ್ಮಪದ ಬಿ.ಜಿ ಹರೀಶ ಅವರ ಕೃತಿಯಾಗಿದೆ. ಹಿಂದೂಗಳಲ್ಲಿ ಭಗವದ್ಗೀತೆಗೆ ಯಾವ ಮಾನ್ಯತೆ ಇದೆಯೋ ಅಂಥ ಗೌರವವನ್ನು ಬೌದ್ಧರ ವಲಯದಲ್ಲಿ ಧಮ್ಮಪದವು ಸಂಪಾದಿಸಿದೆ. ಜೇತವನದಲ್ಲಿ ತಂಗಿದ್ದಾಗ ಬುದ್ಧನು ತನ್ನ ಶಿಷ್ಯರಿಗೆ ಬೋಧಿಸಿದ ಮಾತುಗಳನ್ನು ಆ ನಂತರದಲ್ಲಿ ಆ ಶಿಷ್ಯರು ಲಿಪಿಬದ್ಧಗೊಳಿಸಿದರು. ಆ ಮಾತುಗಳನ್ನು ಗಾಹೆಗಳೆಂದು ಕರೆಯುತ್ತಾರೆ. ಅಂಥ 400ಕ್ಕೂ ಹೆಚ್ಚು ಗಾಹೆಗಳನ್ನು ಒಟ್ಟಾಗಿ ಧಮ್ಮಪದವೆಂದು ಕರೆಯುತ್ತಾರೆ. ಇದರಲ್ಲಿ ಭಗವಾನ್ ಬುದ್ಧನು ಧರ್ಮ, ಜ್ಞಾನ, ಮೋಕ್ಷ, ದುಃಖ, ಶೋಕ, ಬ್ರಾಹ್ಮಣ್ಯ ಮುಂತಾದ ಹಲವು ವಿಷಯಗಳ ಬಗ್ಗೆ ಹೇಳಿರುವ ಚಿಂತನೆಯ ಸಾರವಿದೆ. ಭಿಕ್ಷುಗಳಿಗಾಗಿ ಹೇಳಿದರೂ ಈ ಮಾತುಗಳು ಜಗತ್ತಿನೆಲ್ಲ ಸಾಧಕರಿಗೂ ಅನ್ವಯವಾಗುವಂಥವೇ ಆಗಿವೆ. ಇಂಥ ಗಾಹೆಗಳನ್ನು, ಮೂಲಕ್ಕೆ ಕಿಂಚಿತ್ತೂ ಚ್ಯುತಿ ಬರದಂತೆ, ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸಂಸ್ಕೃತಿ ಚಿಂತಕರಾದ ಡಾ. ಜಿ. ಬಿ. ಹರೀಶರು ಕನ್ನಡಕ್ಕೆ ಅನುವಾದಿಸಿದ್ದಾರೆ. “ಕಾಮಸೂತ್ರ”ದ ಬಳಿಕ ಅಯೋಧ್ಯಾ ಪ್ರಕಾಶನವು ಹೊರತಂದಿರುವ ಅತ್ಯಂತ ಮೌಲಿಕ ಅನುವಾದ ಕೃತಿ ಇದಾಗಿದೆ.

About the Author

ಜಿ.ಬಿ. ಹರೀಶ

ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...

READ MORE

Related Books