‘ಬುದ್ಧ: ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ ಮತ್ತು ಇತರೆ ಬೆಳಕಿನ ಕಥೆಗಳು’ ಜಗತ್ತಿನ ಸರ್ವಶ್ರೇಷ್ಠ ಕಥೆಗಳ ಸ್ವರ್ಣ ಖಜಾನೆ- ಇದು ಬುದ್ಧನ ಜಾತಕ ಕಥೆಗಳ ಹಿನ್ನೆಲೆಯಲ್ಲಿ ರಚಿಸಿರುವ ಕೃತಿ. ಈ ಕೃತಿಯನ್ನು ಲೇಖಕ ಸಿ.ಎಚ್. ರಾಜಶೇಖರ್ ರಚಿಸಿದ್ದಾರೆ. ಅಮರ ಜಾತಕ ಕಥೆಗಳನ್ನು ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗಿದೆ. ಬಹುಶಃ ಜಾತಕ ಕಥೆಗಳನ್ನು ಸುಂದರವಾದ ಕಥೆಗಳನ್ನು ನಾವೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಕಂಡರೂ ಅವುಗಳಲ್ಲಿ ಏನೋ ಒಂದು ಕೊರತೆ ಅಥವಾ ಊನವಿರುತ್ತದೆ. ಆದರೆ ಜಾತಕ ಕಥೆಗಳಲ್ಲಿ ಅಂಥಹ ಲೋಪವನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ, ಅವುಗಳು ಸಮಗ್ರ ಮತ್ತು ಸಮ್ಯಕ್ ದೃಷ್ಟಿಕೋನದಿಂದ ಕೂಡಿದ ಪರಿಪೂರ್ಣ ಕಥೆಗಳಾಗಿವೆ ಎಂಬುದು ಜಾಗತಿಕ ಮಟ್ಟದ ಸಾಹಿತ್ಯ ವಿಮರ್ಶಕರ ಒಟ್ಟಾಭಿಪ್ರಾಯವಾಗಿದೆ. ಅವು ಗೌತಮ ಬುದ್ಧರ ಬದುಕು ಮತ್ತು ಬೋಧನೆಗಳನ್ನು ಒಳಗೊಂಡಿವೆ. ಇಲ್ಲಿನ ಮೂಲಭೂತ ಪ್ರಶ್ತೆ ಎಂದರೆ. ನಾವೇಕೆ ಒಳ್ಳೆಯವರಾಗಬೇಕು ಎಂಬುದೇ ಆಗಿದೆ. ಇದಕ್ಕೆ ಪ್ರತಿ ಉತ್ತರವಾಗಿ ಇಲ್ಲಿನ ಒಂದೊಂದು ಕಥಾರತ್ನಗಳು ಸ್ವಯಂ ನಮ್ಮನ್ನು ನಾವೇ ಹೇಗೆ ಉನ್ನತವಾದ ಮಟ್ಟಕ್ಕೆ ಏರಿಸಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸುತ್ತವೆ.
ಈ ಸಂಕಲನದಲ್ಲಿ ಇಲ್ಲಿ ಯಾರನ್ನೂ ಸುಡದ ಸ್ಥಳವಿಲ್ಲ!, ತಂದೆ ಅಪರಿಚಿತನಿಗೇಕೆ ಅರ್ಧ ರಾಜ್ಯ ಕೊಟ್ಟೆ, ಪ್ರಭು ತಮ್ಮ ಅಂತಿಮ ಸಂದೇಶವೇನು, ಭಾಗ್ಯ ದೊರೆಯದ ಬಾಣವ ಬಿಡದಿರೆಂದ ಬುದ್ಧ, ರಾಜಾ ಕುರುಧರ್ಮವ ನಮಗೂ ಕೊಡು, ದುರ್ಬಲರ ರಕ್ಷಿಸುವುದೇ ಪ್ರಬಲರ ಧರ್ಮ, ರಾಜ ನಾನೇಕೆ ನಿನ್ನ ಶಿಕ್ಷಿಸಿದೆ, ಕೇಳಿದ್ದನ್ನೇಲ್ಲ ಕೊಡುವ ಗಡಿಗೆ ಆದರೆ, ಭವಿಷ್ಯವಾಣಿಗೂ ಮಿಗಿಲು ಜಾಗೃತಿಯೆಂದನಾ ಬೋಧಿಸತ್ವ, ನಿನ್ನ ಶುದ್ಧಿಯಿಂದಲೇ ಪರಿವರ್ತನೆ ಎಂದನಾ ಬುದ್ಧ ಸೇರಿದಂತೆ ಒಟ್ಟು 36 ಕಥೆಗಳು ಸಂಕಲನಗೊಂಡಿವೆ.
©2025 Book Brahma Private Limited.