ಲೇಖಕ ಜೆ.ಆರ್. ಲಕ್ಷ್ಮಣರಾವ್ ಅವರ ಕೃತಿ-ಬೈಜಿಕ ವಿದ್ಯುತ್ತು. ಸರಳ ಜೀವನ ದೂರವಾಗಿ ವಿಲಾಸ-ಐಬೋಗವೇ ಜೀವನದ ಮಾಪನ ವಾಗುತ್ತಿದೆ. ಗಹನ ಚಿಂತನೆ ಮರೆಯಾಗುತ್ತಿದೆ. ಕಾರಣವೇನು ? ಮೊದಲು, ಮಾನವ ತಂತ್ರವಿದ್ಯೆಯನ್ನು (technology) ರೂಪಿಸಿ, ಪಳಗಿಸಿ ಅದರ ನೆರವಿನಿಂದ ಬದುಕಿನಲ್ಲಿ ಹಲವಾರು ಸೌಕರ್ಯಗಳನ್ನು ಗಳಿಸಿದ. ನಿಸರ್ಗದಿಂದ ಪಡೆದ/ಬಗೆದ/ದೋಚಿದ/ಕಬಳಿಸಿದ ಪದಾರ್ಥಗಳ ಮೇಲೆ ನೈಸರ್ಗಿಕ ನಿಯಮಗಳನ್ನು ವ್ಯವಸ್ಥಿತವಾಗಿ ಅನ್ವಯಿಸಿ ಉಪಯುಕ್ತ ಸರಕು ಸೇವೆಗಳನ್ನು ಸೃಷ್ಟಿಸುವ ಕ್ರಿಯಾವಿಧಾನವೇ ತಂತ್ರವಿದ್ಯೆ. ಇದರ ಆಹಾರ ಶಕ್ತಿ. ನಾಗರಿಕತೆಯ ವಿಕಾಸ, ತಂತ್ರವಿದ್ಯೆಯ ಅಭಿವರ್ಧನೆ ಮತ್ತು ಶಕ್ತಿಯ ಅಧಿಕ ವಿನಿಯೋಗವಾಗುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಈ ಎಲ್ಲ ಅಂಶಗಳ ಜಿಜ್ಞಾಸೆಯೇ ಈ ಪುಸ್ತಕ.
©2024 Book Brahma Private Limited.