ನೈಸರ್ಗಿಕ ಸಂಪನ್ಮೂಲಗಳು

Author : ಎಚ್.ಆರ್‌. ಕೃಷ್ಣಮೂರ್ತಿ

Pages 104

₹ 81.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಡಾ. ಎಚ್.ಆರ್. ಕೃಷ್ಣಮೂರ್ತಿ ಅವರು ಬರೆದ ಕೃತಿ-`ನೈಸರ್ಗಿಕ ಸಂಪನ್ಮೂಲಗಳು (ವಿಜ್ಞಾನ ಸರಳ ಪರಿಚಯ)`ನೈಸರ್ಗಿಕ ಸಂಪನ್ಮೂಲಗಳು ಭೂಮಿ ಅಥವಾ ಕಚ್ಛಾ ವಸ್ತುಗಳನ್ನು , ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವು ಪ್ರಾಕೃತಿಕ ರೂಪದಲ್ಲಿ ಇರುತ್ತವೆ. ನೈಸರ್ಗಿಕ ಸಂಪನ್ಮೂಲವನ್ನು ವಿವಿಧ ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯತೆಯ ಆಧಾರದ ಮೇಲೆ ವಿಂಗಡಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳೆಲ್ಲವೂ ಪರಿಸರ ಜನ್ಯ. ಹೆಚ್ಚಿನವುಗಳು ನಮ್ಮ ಉಳಿವಿಕೆಗೆ ಅತ್ಯವಶ್ಯಕ, ಮಿಕ್ಕವು ನಮ್ಮ ಬಯಕೆ ಪೂರೈಸಲು ಇರುವ ಸಾಧನಗಳು. ನವೀಕರಿಸಬಹುದಾದ ಸಂಪನ್ಮೂಲಗಳು ಹಾಗೂ ನವೀಕರಿಸಲಾಗದ ಸಂಪನ್ಮೂಲಗಳು ಎಂದು ವಿಂಗಡಿಸಿದ್ದು, ಈ ಕುರಿತು ಲೇಖಕರು ವಿವರ ನೀಡಿದ ಕೃತಿ ಇದು.

About the Author

ಎಚ್.ಆರ್‌. ಕೃಷ್ಣಮೂರ್ತಿ

ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಹೆಚ್ಚುವರಿ ಮಹಾನಿದೇಶಕರಾಗಿ ಸೇವೆ ಸಲ್ಲಿಸಿದ ಎಚ್.ಆರ್. ಕೃಷ್ಣಮೂರ್ತಿ ಅವರು ವಿಜ್ಞಾನ ಲೇಖಕರು. ಕಲ್ಪವೃಕ್ಷದ ಜಾಡು ಹಿಡಿದು, ಪರಿಸರ, ನಮ್ಮ ಮರಗಳು ಇವರ ಕೃತಿಗಳು. ಡಾ. ಉಲ್ಲಾಸ ಕಾರಂತ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ‘ಹುಲಿಯ ಬದುಕು’ ಶೀರ್ಷಿಕೆಯಡಿ ಈ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ.  ವಿಜ್ಞಾನ ಸಾಹಿತ್ಯ ಪ್ರಶಸ್ತಿ, ಶ್ರೇಷ್ಠ ವಿಜ್ಞಾನ ಲೇಖಕ ಪ್ರಶಸ್ತಿ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ವಿಜ್ಞಾನ ಸಂವಹನ ಪ್ರಶಸ್ತಿ, ಜೀವಮಾನ ಸಾಧನೆಯ ಪ್ರಶಸ್ತಿ ಲಭಿಸಿವೆ.  ...

READ MORE

Related Books