ಆಧುನಿಕ ಜೀವನದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪ್ರಾಮುಖ್ಯ ನಿತ್ಯವೂ ನಮ್ಮ ಅನುಭವಕ್ಕೆ ಬರುತ್ತಿದೆ. ಒಂದೇ ಒಂದು ದಿನ ಪೆಟ್ರೋಲ್, ಡೀಸೆಲ್ ಸರಬರಾಜು ನಿಂತುಹೋದರೂ ನಮ್ಮ ಪ್ರಗತಿಯ ಚಕ್ರ ಉರುಳುವುದಿಲ್ಲ. ಸಾರಿಗೆ ಸಂಚಾರವೇ ಅಸ್ತವ್ಯಸ್ತವಾಗುತ್ತದೆ. ಅಡುಗೆ ಅನಿಲ ದೊರೆಯದೇ ಹೋದಲ್ಲಿ ದೇಶದ ಗೃಹಿಣಿಯರೆಲ್ಲ ಕಂಗೆಡುತ್ತಾರೆ. ಸೀಮೆಎಣ್ಣೆ ಎರಡು ದಿನ ತಡವಾದರೂ ಕೆಳ ಮಧ್ಯಮವರ್ಗ ಚಡಪಡಿಸುತ್ತದೆ. ಇವೆಲ್ಲವೂ ಪೆಟ್ರೋಲಿಯಂ ಉತ್ಪನ್ನಗಳೇ. ಕೊಲ್ಲಿ ರಾಷ್ಟ್ರಗಳು ಪೆಟ್ರೋಲ್ ಮೇಲೆ ತೇಲುತ್ತ ಜಗತ್ತನ್ನೇ ನಿಯಂತ್ರಿಸುತ್ತಿವೆ, ಅಭಿವೃದ್ಧಿಶೀಲ ರಾಷ್ಟ್ರಗಳು ಭಾರಿ ವಿದೇಶಿ ವಿನಿಮಯ ತೆತ್ತು ಈ ದ್ರವಬಂಗಾರವನ್ನು ಆಮದು ಮಾಡಿಕೊಳ್ಳಬೇಕು. ಪೆಟ್ರೋಲ್ ಕುರಿತ ಈ ಪುಸ್ತಕ ಕೌಟುಂಬಿಕ ವಾತಾವರಣದಲ್ಲಿ ಸಂವಾದದ ಮೂಲಕ ತೆರೆದುಕೊಳ್ಳುತ್ತದೆ. ಆ ಮೂಲಕ ಪೆಟ್ರೋಲ್ ನ ಇತಿಹಾಸ, ಬಳಕೆ, ಸಂಸ್ಕರಣೆ, ಭಾರತದ ಸಂಪನ್ಮೂಲ, ಗಣಿ ಗಾರಿಕೆ, ನಾಳೆ ನಾವು ರೂಪಿಸಬೇಕಾದ ತಂತ್ರ ಇಂಥ ಪ್ರಮುಖ ಅಂಶಗಳ ಬಗ್ಗೆ ಈ ಕೃತಿಯನ್ನು ಓದಿದವರಿಗೆ ಖಚಿತ ಅಭಿಪ್ರಾಯ ಮೂಡುತ್ತದೆ.
©2024 Book Brahma Private Limited.