ಭಾರತೀಯ ಕ್ರಿಕೆಟ್ ಇತಿಹಾಸ

Author : ಚೆನ್ನಗಿರಿ ಕೇಶವಮೂರ್ತಿ

Pages 150

₹ 100.00




Published by: ಸಂಗಮ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್
Address: 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಮೌಂಟ್ ಜಾಯ್ ಬಡಾವಣೆ, ಹನುಮಂತ ನಗರ, ಬೆಂಗಳೂರು.560019

Synopsys

ಸಿ. ಕೇಶವಮೂರ್ತಿಯವರ ಈ ಪುಸ್ತಕವು ಭಾರತೀಯ ಕ್ರಿಕೆಟ್ ಇತಿಹಾಸದ ಬಗ್ಗೆ ಬಹಳ ಚೆನ್ನಾಗಿ, ಸರಳವಾದ ರೀತಿಯಲ್ಲಿ ಮಾಹಿತಿಯನ್ನು ಒದಗಿಸುತ್ತದೆ. ಕ್ರಿಕೆಟ್ ಇತಿಹಾಸದ ಬಗ್ಗೆ ಇಷ್ಟು ವಿಸ್ತಾರವಾದ ವಿಷಯಗಳನ್ನು ಒಳಗೊಂಡಿರುವಂತಹ ಪುಸ್ತಕ ಕನ್ನಡದಲ್ಲಿ ಇದೇ ಪ್ರಥಮ. ಭಾರತದಲ್ಲಿ ಕ್ರಿಕೆಟ್ ಹಂತ ಹಂತವಾಗಿ ಬೆಳೆದು ಬಂದ ಬಗೆಯನ್ನು ಲೇಖಕರು ಸಂಪೂರ್ಣವಾಗಿ ಇಲ್ಲಿ ದಾಖಲಿಸಿದ್ದಾರೆ. ಕ್ರಿಕೆಟ್ ಇತಿಹಾಸದ ಬಗ್ಗೆ ತಿಳಿಯಬೇಕೆಂದಿರುವವರಿಗೆ ಇದೊಂದು ಉತ್ತಮ ಆಕರವಾಗಲಿದೆ.

About the Author

ಚೆನ್ನಗಿರಿ ಕೇಶವಮೂರ್ತಿ

ದೇಶಿ ಕ್ರಿಕೆಟ್ ಅಂಕಿ ಅಂಶ ಬರಹಗಾರರಾಗಿ ಗುರುತಿಸಿಕೊಂಡಿರುವ ಚೆನ್ನಗಿರಿ ಕೇಶವಮೂರ್ತಿ ಅವರಿಗೆ ಮುಂಬೈನಲ್ಲಿರುವ ಭಾರತ ಕ್ರಿಕೆಟ್ ಸಂಖ್ಯಾಶಾಸ್ತ್ರ ಸಂಸ್ಥೆ ‘ಆನಂದ್ ಜಿ ಡೊಸ್ಸಾ’ ಪ್ರಶಸ್ತಿ ನೀಡಿ ಗೌರವಿಸಿದೆ. 2017ನೇ ಸಾಲಿನಲ್ಲಿ ಅವರು ಬರೆದ ಕ್ರಿಕೆಟ್ ಸ್ಟ್ಯಾಟ್ಸ್ ಜರ್ನಲ್ ಲೇಖನಕ್ಕೆ ಈ ಪುರಸ್ಕಾರ ಲಭಿಸಿದೆ. ಕೇಶವಮೂರ್ತಿ ಅವರು ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಗಳಿಗೆ ಕ್ರಿಕೆಟ್ ಅಂಕಿಅಂಶಗಳನ್ನು ಬರೆಯುತ್ತಾರೆ. ಅಲ್ಲದೆ ಕ್ರಿಕೆಟ್ ಗೆ ಸಂಬಂಧಿಸಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ‘ಭಾರತ ರತ್ನ ಸಚಿನ್ ತೆಂಡೊಲ್ಕರ್’ ಕೃತಿ ಹೆಚ್ಚು ಜನಪ್ರಿಯವಾಗಿದೆ. ಈ ಕೃತಿಗೆ ಸ್ವತಃ ಸಚಿನ್ ತೆಂಡೊಲ್ಕರ್ ಮುನ್ನುಡಿ ಬರೆದಿದ್ದಾರೆ ...

READ MORE

Related Books