ಲೇಖಕಿ ತ್ರಿವೇಣಿ ಶಿವಕುಮಾರ್ ಅಮ್ಮ ಹೇಳಿದ ಕಥೆಗಳನ್ನು ಒಟ್ಟುಗೂಡಿಸಿ ಅಮ್ಮಂದಿರೊಂದಿಗೆ ಮಕ್ಕಳಿಗೂ ಕಥೆ ಓದುವ , ಓದಿ ಹೇಳುವ ಈ ಕಥಾ ಸಂಕಲನವನ್ನು ರೂಪಿಸಿದ್ದಾರೆ.
ತಾಯಿಂದಿರು ಮಕ್ಕಳಿಗೆ ಕಥೆ ಹೇಳಿ ಮಲಗಿಸುವುದು ಹಿಂದಿನ ಕಾಲದಲ್ಲಿ ರೂಡಿಯಾಗಿತ್ತು. ಅಮ್ಮನಿಗೆ ಅವರಮ್ಮ ಹೇಳಿದ ಕಥೆಗಳನ್ನು ಮಕ್ಕಳಿಗೆ ತಲುಪಿಸುವ ಮೂಲಕ ಮಕ್ಕಳ ಸೂಕ್ಷ್ಮ ಸಂವೇದನೆಯ ಬೆಳವಣಿಗೆಗೆ ಕಾರಣವಾಗುತ್ತಿದ್ದರು. ಆದರೆ ಈಗ ಆಧುನಿಕ ಜಗತ್ತು ಮಕ್ಕಳನ್ನು ಟಿವಿ ಮೊಬೈಲ್ ಗೆ ಒಪ್ಪಿಸಿ ಅವರ ಕಲ್ಪನಾ ಸಾಮರ್ಥ್ಯವನ್ನೇ ಕಿತ್ತುಕೊಂಡಿದೆ. ಇವುಗಳ ಹಿನ್ನಲೆಯಲ್ಲಿ ಕಥಾ ನಿರೂಪಣೆಯನ್ನು ಮಕ್ಕಳಿಗೆ ತೆರೆದಿಡುವ ವಿಭಿನ್ನ ಕೃತಿ ’ಅಮ್ಮ ಹೇಳಿದ ಕಥೆಗಳು’.
©2025 Book Brahma Private Limited.