ಕನ್ನಡ ಸಾಹಿತ್ಯ ಪ್ರಾಧ್ಯಾಪಕಿಯಾಗಿ ಅಸಂಖ್ಯಾ ವಿದ್ಯಾರ್ಥಿಗಳನ್ನು ರೂಪಿಸಿ ಈಗ ನಿವೃತ್ತರಾಗಿರುವ ಅನುಸೂಯದೇವಿ ಅವರ ಅನೇಕ ಚಿಂತನಾಶೀಲ ಕೃತಿಗಳು ಪ್ರಕಟವಾಗಿವೆ. ಕಾದಂಬರಿಗಳು, ಕವಿತಾಸಂಕಲನ, ಮಕ್ಕಳಿಗಾಗಿ ಬರೆದ ಕಥೆಗಳು, ವೈಚಾರಿಕ ಮತ್ತು ಆಧ್ಯಾತ್ಮಿಕ ಲೇಖನಗಳ ಸಂಗ್ರಹಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಪ್ರಸ್ತುತ ಕೃತಿ ಆಕಾಶದ ಕರೆ ಅನುಸೂಯದೇವಿಯವರ ಅತ್ಯುತ್ತಮ ಕಥಾ ಸಂಕಲನವಾಗಿದೆ. ಮೂರು ತಲೆಮಾರಿನಲ್ಲಿಯ ಹೆಣ್ಣಿನ ಬದುಕು, ಸ್ಥಿತ್ಯಂತರಗಳಿಗೆ ಕನ್ನಡಿ ಹಿಡಿಯುವ ಇಲ್ಲಿನ ಕಥೆಗಳು ಅಂದೂ ಇಂದೂ ಸ್ತ್ರೀಯ ಮನೋಲೋಕದ ತಳಮಳ ತಲ್ಲಣಗಳು, ನೋವು ನಿರಾಸೆಗಳು, ಪ್ರೀತಿಲೋಕದ ಭಾವಯಾನಗಳು ಎಲ್ಲವನ್ನು ಅನನ್ಯವಾಗಿ ಚಿತ್ರಿಸಿಕೊಡುತ್ತದೆ.
©2025 Book Brahma Private Limited.