’ಗಂಡುಗಲಿಗಳ ಆಟ ಕಬಡ್ಡಿ’ ಎಂ.ಜೆ ಸುಂದರ್ ರಾಮ್ ಅವರು ಆಟಗಳಿಗೆ ಸಂಬಂಧಿಸಿದ ಬರೆದ ಕೃತಿ. ಮೇಲ್ನೋಟಕ್ಕೆ ಕಬ್ಬಡ್ಡಿ ಒರಟು ಎನಿಸಿದರೂ ಉಸಿರಾಟದ ವ್ಯಾಯಾಮದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಐಶ್ವರ್ಯಗಳನ್ನೂ ಪೋಷಿಸುವ ಪ್ರಾಣಾಯಾಮವನ್ನು ಈ ಆಟ ಅಳವಡಿಸಿಕೊಂಡಿದೆ. ಆದ್ದರಿಂದಲೇ, ಇತರೆ ಆಟಗಳಿಗಿಂತ ಇದು ಭಿನ್ನವಾಗಿದೆ. ಇಂತಹ ಅಪೂರ್ವ ಆಟವನ್ನು ನೋಡಿ ಬೆರಗಾದ ವಿವಿಧ ದೇಶಗಳ ಯುವಕರು ’ ಹೀಗೂ ಒಂದು ಆಟವಿದೆಯೇ’ ಎಂದು ಮೂಕವಿಸ್ಮಿತರಾಗಿ, ಕಬ್ಬಡ್ಡಿಗೆ ಮಾರು ಹೋಗಿದ್ದಾರೆ. ಇಂತಹ ಉತ್ಕೃಷ್ಟ ಆಟವೊಂದನ್ನು ನೀಡಿದ್ದಕ್ಕಾಗಿ ಭಾರತದ ಬಗ್ಗೆಯೂ ಅವರ ಗೌರವ ಇಮ್ಮಡಿಗೊಳಿಸಿದೆ. ಒಂದಾನೊಂದು ಕಾಲದಲ್ಲಿ, ಕಬಡ್ಡಿ ಒರಟಾಗಿಯೇ ಇತ್ತು. ಆಟಗಾರರ ಮೈಯೆಲ್ಲ ರಕ್ತಮಯವಾಗಿತ್ತು. ಬಟ್ಟೆಬರೆ ಕೊಳಕಾಗಿ, ಹರಿದು, ನೋಡುಗರಿಗೆ ಅಸಹ್ಯವುಂಟು ಮಾಡುತ್ತಿದ್ದವು. ಆದರೆ, ಇಂದು ಜನಪ್ರಿಯ ಆಟವಾಗಿ ಮಾರ್ಪಟ್ಟು, ಶಕ್ತಿಗಿಂತ ಯುಕ್ತಿಯೇ ಪ್ರಧಾನವಾಗಿದೆ. ಉತ್ಸಾಹಿ ಆಟಗಾರರ ಹಾಗೂ ಕೋಚ್ ಗಳ ಸತತ ಪ್ರಯತ್ನಗಳಿಂದ ಪ್ರತಿದಿನವೂ ಅನೇಕ ಅತ್ಯಾಧುನಿಕ ಕೌಶಲ್ಯಗಳು, ರಣನೀತಿಗಳು ಮತ್ತು ತಾಂತ್ರಿಕತೆಗಳು ಸೇರ್ಪಡೆಯಾಗಿವೆ’ ಎನ್ನುತ್ತಾರೆ ಲೇಖಕರು.
©2024 Book Brahma Private Limited.