About the Author

ಸಾಹಿತಿ ಪ್ರೊ. ಕೆ. ಭೈರಪ್ಪನವರು ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ವಿಠಲಾಪುರದವರು. ತಂದೆ ಕವನಯ್ಯ, ತಾಯಿ ಲಿಂಗಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಮಾಯಸಂದ್ರದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಸೃಜನಶೀಲ ಹಾಗೂ ಸೃಜನೇತರ ಎರಡೂ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕಲ್ಬತರು, ಸಿರಿಸಂಪಿಗೆ, ಕಲ್ಪಶ್ರೀ ಹಾಗೂ ನೇಗಿಲಯೋಗಿ ಸ್ಮರಣ ಸಂಚಿಕೆಗಳ ಸಂಪಾದಕರಾಗಿದ್ದರು.
ಪ್ರಮುಖ ಕೃತಿಗಳೆಂದರೆ ಮೇಡಂರತ್ನ, ದೇವಪುರೆ, ರಶ್ಮಿ, ಯಶಸ್ವಿನಿ, ಬೃಂದಾ (ಕಾದಂಬರಿ), ಮಕ್ಕಳ ಮನಸ್ಸು, ಬಾಲರ ಭಾವನೆ, ಕಿಶೋರರಕಿರಣ, ಮಕ್ಕಳ ಮಾಧುರ್ಯ, ಕಿರಿಯರ ಕಲರವ, (ಶಿಶುಗೀತೆ), ಏಳಿ ಯುವ ಜನರೆ ಎದ್ದೇಳಿ, ಭವಕಾಲ (ಕವನ ಸಂಕಲನ). ಇವರಿಗೆ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಸಿಟಿಜನ್ಸ್ ಸೊಸೈಟಿ ಆಫ್ ಇಂಡಿಯಾ ನವದೆಹಲಿ ಶ್ರೇಷ್ಠತಾ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

 

ಭೈರಪ್ಪ ಕೆ.