ತಿರುಪತಿ ನಾಯಕ್- 1968ರಲ್ಲಿ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು, ಆಶಿಹಾಳ ತಾಂಡದಲ್ಲಿ ಜನಿಸಿದರು. ಆಶಿಹಾಳ್, ಮುದಗಲ್, ಮುದ್ದೇಬಿಹಾಳ್, ಧಾರವಾಡ, ಚಿದಂಬರಂ ಊರುಗಳಲ್ಲಿ ವ್ಯಾಸಂಗ, ಕನ್ನಡ, ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ. ಮಲೆನಾಡಿನ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ರೆಡ್ಕ್ರಾಸ್ನಲ್ಲಿ ಸಕ್ರಿಯ ಸೇವೆ. ಕನ್ನಡದ ಪ್ರಸಿದ್ದ ಪತ್ರಿಕೆಗಳಲ್ಲಿ ಬರೆದ ಅನುಭವ. ಆಕಾಶವಾಣಿಗಳಲ್ಲಿ ಹಲವಾರು ಚಿಂತನಗಳು, 'ಹಳ್ಳಿಗಳು ಸಾಯುತ್ತಿವೆ' ಪ್ರಬಂಧ ಸಂಕಲನಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, 'ಗಂಧ ಕುಸುಮ', 'ಭಾವ ಬಯಲು', 'ದೀಪವಿಲ್ಲದ ದಾರಿ', 'ದಮನಿತೆ' ಕವನ ಸಂಕಲನಗಳು. 'ಮುಳುಗಿದವರು', 'ನದಿ ಹರಿಯುತ್ತಿರಲಿ” ಪ್ರಬಂಧಗಳು, 'ಮತ್ತೆ
ಬರದ ಕಥೆ', 'ಎಲ್ಲವನ್ನು ಕಳೆದುಕೊಂಡು' ಕಥಾ ಸಂಕಲನಗಳು. 'ಕಾಲಗುಣ' ನಾಟಕ, 'ಟಾವರ್' ಕಾದಂಬರಿ ಪ್ರಕಟಿತ 'ಸನ್ಮತಿ' ಸಾತ್ವಿಕ ಅನುಭಾವ ಚೌಪದಿ ಪ್ರಕಟಿತ ಕೃತಿಗಳು.