ತಂಬಂಡ ವಿಜಯ್ ಪೂಣಚ್ಚ ಮೂಲತಃ ಮಡಿಕೇರಿಯವರು. ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ನಂತರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಕುರಿತು ಬರೆದ ‘ರಾಜೇಂದ್ರನಾಮೆ ಮರು ಓದು’ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರರಾಗಿರುವ ವಿಜಯ್ ಪೂಣಚ್ಚ, ಸದ್ಯ ಹಂಪಿ ಕನ್ನಡ ವಿ.ವಿ.ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.