About the Author

ಕೇರಳದ ತ್ರಿಪುನಿತ್ತೂರ್ ಗ್ರಾಮದಲ್ಲಿ ಜನಿಸಿದ ನಾ. ಕಸ್ತೂರಿ ಅವರು ಕೇರಳದ ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ತಂದೆ ನಾರಾಯಣ. ಇತಿಹಾಸದಲ್ಲಿ ಸ್ನಾತಕೋತ್ತರ (ಎಂ.ಎ.) ಪಡೆದ ನಂತರ ಬಿ.ಎಲ್. ಪದವಿ ಪಡೆದರು. ವಕೀಲಿ ವೃತ್ತಿಗೆ ಸೇರುವ ಬದಲು ಶಿಕ್ಷಕ ವೃತ್ತಿಯತ್ತ ಹೊರಳಿದರು. ಮೈಸೂರಿಗೆ ಬಂದ ಅವರು ಅಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ನಾಟಕ, ಪ್ರಹಸನ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ.

ಗಗ್ಗಯ್ಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ, ರಾಮಕೃಷ್ಣಯ್ಯನ ದರ್ಬಾರು, ಹೋಳು-ಬಾಳು, ಬ್ಯಾಂಕಿನ ದಿವಾಳಿ ಮುಂತಾದುವು ಅವರ ನಾಟಕಗಳು. ಗಾಳಿಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲ, ಕಲ್ಲೋಲ, ಉಪಾಯ ವೇದಾಂತ ಮುಂತಾದ ಹಾಸ್ಯ ಸಂಕಲನಗಳನ್ನು ರಚಿಸಿರುವುದಲ್ಲಿ ಹಾಸ್ಯ ಕಾದಂಬರಿಗಳಲ್ಲಿಯೂ ಕೃಷಿ ಸಾಧಿಸಿದ್ದಾರೆ. ಚೆಂಗೂಲಿ ಚೆಲುವ, ಡೊಂಕುಬಾಲ, ಚಕ್ರದೃಷ್ಟಿ. ನೊಂದಜೀವಿ ಅವರ ಅನುವಾದಿತ ಕೃತಿ. ಅವರು 14 ಆಗಸ್ಟ್ 1987ರಂದು ನಿಧನರಾದರು. 

ನಾ. ಕಸ್ತೂರಿ

(25 Dec 1897-14 Aug 1987)