About the Author

ಲೇಖಕ ಮಂಜುನಾಥ ಉಲವತ್ತಿ ಶೆಟ್ಟರ್ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿಯವರು. ತಂದೆ ರೇವಣಸಿದ್ದಪ್ಪ, ತಾಯಿ ನಾಗಮ್ಮ. ಲೇಖಕರು ಎಂ.ಎ, ಎಂ,ಫಿಲ್ ಪದವೀಧರರು. ಬಳ್ಳಾರಿಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು. ಆರ್ಥಿಕ, ಪ್ರಚಲಿತ, ವೈಚಾರಿಕ, ವೈಜ್ಞಾನಿಕ, ಸಾಮಾಜಿಕ, ಐತಿಹಾಸಿಕ ಮತ್ತು  ಸಾಂಸ್ಕೃತಿಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸಹಪ್ರಾಧ್ಯಾಪಕರು. ಪ್ರಸ್ತುತ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವ್ಯಾಸಂಗ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಪ್ರಗತಿಪರ ಚಿಂತಕರ ಒಕ್ಕೂಟದಲ್ಲಿದ್ದು, ಸೆಮಿನಾರ್, ವಿಶೇಷ ಉಪನ್ಯಾಸಗಳನ್ನು ನೀಡಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 

ಕೃತಿಗಳು: ಎಪ್ಪತ್ತರ ಹರೆಯದ ನನ್ನ ದೇಶ, ಜಾಗತೀಕರಣದ ತಿರುವಿನಲ್ಲಿ ಭಾರತ , ಅನುರಣನ, ನಿರಾಭರಣ ಭಾರತ, ಪಾಪ ಪರಾಕಾಷ್ಟೆ,  ದೇಶಿಯ ಸಮಾಜೋಆರ್ಥಿಕ ಸುಧಾರಕರು ಮತ್ತು ಲಾಕ್‍ಡೌನ್(ಕೊರೊನಾ ರೋಗ ಕಾಲದ ತಲ್ಲಣಗಳು) .

 

ಮಂಜುನಾಥ ಉಲವತ್ತಿ ಶೆಟ್ಟರ್