About the Author

ಡಾ. ಮಾದುಪ್ರಸಾದ್ ಹುಣಸೂರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದವರು. ತಂದೆ ಕುಂಡಯ್ಯ, ತಾಯಿ ಕಾಳಮ್ಮ. ಜನನ 1982ರ ಮಾರ್ಚ್ 20 ರಂದು. ಪ್ರಾಥಮಿಕ ಶಿಕ್ಷಣ-ಹುಟ್ಟೂರಿನಲ್ಲಿ, ಮಾಧ್ಯಮಿಕ ಶಿಕ್ಷಣ-ಬೋಳನಹಳ್ಳಿಯಲ್ಲಿ, ಪ್ರೌಢಶಾಲಾ ಶಿಕ್ಷಣ-ಅರಸಿ ಹುಣಸೂರಿನಲ್ಲಿ ನಡೆಯಿತು.  ಮೈಸೂರಿನ ವಸಂತ ಮಹಲ್ ನಲ್ಲಿ ಶಿಕ್ಷಕ ತರಬೇತಿ ಪಡೆದು, 2004 ರಲ್ಲಿ ಪಿರಿಯಾಪಟ್ಟಣದ ಭೂತನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದರು. 

ಕೃತಿಗಳು: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ  'ಮಕ್ಕಳ ಕಥಾ ಸಾಹಿತ್ಯ ಸ್ವರೂಪ: ತಾತ್ವಿಕತೆ ' ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿ.ಎಚ್.ಡಿ,  ಎಂ.ಎಸ್. ಪುಟ್ಟಣ್ಣರ ಮಕ್ಕಳ ಸಾಹಿತ್ಯದ ಕೊಡುಗೆ ಎಂಬುದು ಸಂಶೋಧನಾ ಗ್ರಂಥ ಪ್ರಕಟಣೆ, ‘ಹಾಡೋಣ ಬಾರೋ ಕಿಶೋರ,   'ಬೆಂದವರ ಬೆವರು, ಹಕ್ಕಿಗಾನ , ಚಿಣ್ಣರ ಚಿಲಿಪಿಲಿ ಇವು ಮಕ್ಕಳ ಕವನ ಸಂಕಲನಗಳು,  ತೆವಲು, ಸೀರೆ, ಮಂಟಿಮಾಳ, ಬಯಕೆಯ ಕೋಳಿ, ಭರವಸೆ, ರಕ್ತದಾನವೂ ಕುಲದ ಮಾನವೂ, ಸವಣಗುಡ್ಡ -ಇವರ  ಕಥೆಗಳು. 'ಕೂಳಿನ ಕಾಳಗ' ಕಥಾ ಸಂಕಲನ. ತೊಟ್ಟಿಲಗೊಂಬೆ ಕಾದಂಬರಿ  ಪ್ರಕಟಿಸಿದ್ದಾರೆ. 

ಪ್ರಶಸ್ತಿಗಳು: ಮಂಡ್ಯದ ಯುವ ಬರೆಹಗಾರರ ಬಳಗವು 2007ರಲ್ಲಿ 'ರಾಧಾಕೃಷ್ಣನ್ ಆದರ್ಶ ಶಿಕ್ಷಕ ಪುರಸ್ಕಾರ,  2010ರಲ್ಲಿ 'ನಗೆ ತೊರೆ'  ಹಾಸ್ಯ ಚುಟುಕು ಸಂಕಲನ,  2011ರಲ್ಲಿ ' ‘ಗೋಲಿ ಗೆಜ್ಜುಗದ ಹುಡುಗ' ಮಕ್ಕಳ ಕಾದಂಬರಿ,  ಮೈಸೂರು ಸಾಹಿತ್ಯ ಬಳಗವು 'ಸಾಹಿತ್ಯ ಸಿಂಧು' ಪುರಸ್ಕಾರ,  2014ರಲ್ಲಿ 'ಚುಕ್ಕಿ ನವಿಲು ಗರಿ' ಮಕ್ಕಳ ಪದ್ಯಗಳಿಗೆ ಶ್ರೀ ಜಿ.ಬಿ. ಹೊಂಬಳ ರಾಜ್ಯ ಪುರಸ್ಕಾರ ಲಭಿಸಿದೆ. ಮಕ್ಕಳ ಸಾಹಿತ್ಯ ಪ್ರಚಾರಕ್ಕಾಗಿ 'ಬಾಲ ಸಾಹಿತ್ಯ ಚಿಂತನಾ ಬಳಗ' ಸಂಘಟಿಸಿದ್ದಾರೆ. 

 

ಮಾದು ಪ್ರಸಾದ ಹುಣಸೂರು

(20 Mar 1982)