About the Author

.ಲೇಖಕ ಹಾಗೂ ಪತ್ರಕರ್ತ  ಕೆ. ಕರಿಸ್ವಾಮಿ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಳಿಗೇನಹಳ್ಳಿ ಅಂಚೆ ವ್ಯಾಪ್ತಿಯ ಜವನಹಳ್ಳಿ ಗ್ರಾಮದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ ಸಿ ಪದವೀಧರರು. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (1999), ಪತ್ರಿಕೋದ್ಯಮದಲ್ಲಿ (1999) ಸ್ನಾತಕೋತ್ತರ ಡಿಪ್ಲೊಮಾ, ಅಳಗಪ್ಪ ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-2007.), ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಡಾಕ್ಟರೇಟ್ ಆಫ್ ಲಿಟರೇಚರ್ (ಡಿ.ಲಿಟ್-2021)  ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಬೆಂಗಳೂರಿನ ಮೆರು ಇನ್ಫೋ ಸಲ್ಯೂಷನ್ಸ್,ನಲ್ಲಿ ಮುಖ್ಯ ಸಂಪಾದಕ,, ಟೈಮ್ಸ್ ಇಂಟರ್‍ನೆಟ್ ಲಿಮಿಟೆಡ್.ನಲ್ಲಿ ಉಪಸಂಪಾದಕ,  ಪ್ರಜಾಪ್ರಗತಿ ದಿನಪತ್ರಿಕೆಯ ಉಪ ಸಂಪಾದಕ, ನಂತರ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಬಾಗಲಕೋಟೆ ಆವೃತ್ತಿಯಲ್ಲಿ ಹಿರಿಯ ಉಪ-ಸಂಪಾದಕರಾಗಿ ,ಗಂಗಾವತಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ, ನಂತರ ಬೆಂಗಳೂರಿನಲ್ಲಿ ಕಿರಿಯ ಸಹಾಯಕ ಸಂಪಾದಕ, ಸಂಪಾದಕೀಯ ಸಮನ್ವಯಕಾರರಾಗಿ ಕೆಲಸ ನಿರ್ವಹಿಸಿದ್ದಾರೆ.  ಬೆಂಗಳೂರಿನ ಪ್ರೆಸ್‍ಕ್ಲಬ್, ಸದಸ್ಯರು,  ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ನ್ಯಾಷನಲ್ ಬುಕ್ ಟ್ರಸ್ಟ್.ಸದಸ್ಯರು. 

ಕೃತಿಗಳು: ಹುರಿದುಂಬಿ' (ಲೇಖನಗಳ ಸಂಗ್ರಹ-(2010) ,  2010ರಲ್ಲಿ `ಉಕ್ಕೆಕಾಯಿ' ಚೊಚ್ಚಲ ಕವನ ಸಂಕಲನ, 2006ರಲ್ಲಿ "ಸಿಂಗಾರಿತ್ಲು' ನಾಟಕ, ಮಠಗಳ ಬಗ್ಗೆ ಸಂದರ್ಶನವನ್ನಾಧರಿಸಿದ `ಮಠ ಕಟ್ಟಿ ನೋಡು' ಲೇಖನ, 2000ದಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ , ಸ್ಟಡೀಸ್' ನ ಪುಸ್ತಕದಲ್ಲಿ ಸೇರ್ಪಡೆ, 19 ವರ್ಷದೊಳಗಿನ ಯುವ ಕವಿಗಳಿಗೆ ದೆಹಲಿಯ 'ಪೊಯೆಟ್ರಿ ಸೊಸೈಟಿ ಆಫ್ ಇಂಡಿಯಾ' ಸಂಸ್ಥೆ 1994ರಲ್ಲಿ ಮೈಸೂರಿನಲ್ಲಿ ನಡೆಸಿದ ಕಾವ್ಯ ಕಮ್ಮಟಕ್ಕೆ ಆಯ್ಕೆ. ಇದೇ ಸಂಸ್ಥೆ ಹೊರತಂದ 'ಹದಿ ಹೆಜ್ಜೆ' ಎಂಬ ಕನ್ನಡ ಮತ್ತು ಇಂಗ್ಲಿಷ್ ಕವನ ಸಂಕಲನಗಳಲ್ಲಿ ಕವನಗಳು ಸೇರಿವೆ, ಇಂಡಿಯಾ ಇನೋ ಡಾಟ್ ಕಾಂ, ಟೈಮ್ಸ್ ಆಫ್ ಇಂಡಿಯಾದ ಕೆಂಡಸಂಪಿಗೆಗಳ ಇಂಟರ್‍ನೆಟ್ ಆವೃತ್ತಿಗಳು, ದಿ ಸಂಡೇ ಇಂಡಿಯನ್ ವಿಕ್ರಾಂತ ಕರ್ನಾಟಕ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಕನ್ನಡಪ್ರಭ, ವಿಜಯ ಕರ್ನಾಟಕ, ಪ್ರಜಾಪ್ರಗತಿ, ಸಂಕ್ರಮಣ, ತರಂಗ, ಮಲ್ಲಿಗೆ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಸಂಪಾದಕರ ಸಂಪಾದಕ (ಸಂಪಾದನೆ), ಅಮ್ಮನ ನೆವದಲ್ಲಿ (ಪ್ರಬಂಧಗಳ ಸಂಕಲನ), ಸಾವುಕಾರ  ಸುಬ್ಬಮ್ಮ, (ಹಾಸ್ಯಲೇಖನ, ರೇಡಿಯೋ ನಾಟಕಗಳ ಸಂಕಲನ)  

ಪ್ರಶಸ್ತಿ-ಪುರಸ್ಕಾರಗಳು:   ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನ ಅತ್ಯುತ್ತಮ ವಿದ್ಯಾರ್ಥಿಗಾಗಿ ನೀಡುವ ಕನ್ನಡಪ್ರಭ ಪ್ರಶಸ್ತಿ-1999., 'ಸಿಂಗಾರಿತ್ಲು' ನಾಟಕ ಕೃತಿಗೆ ಬಿಎಂಟಿಸಿ ವತಿಯಿಂದ ಕಸಾಪದಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯ 2006ನೇ ಸಾಲಿನ 'ಅರಳು' ಪ್ರಶಸ್ತಿ., ಪುಸ್ತಕ ಪ್ರಾಧಿಕಾರ ಲೇಖಕರ ಚೊಚ್ಚಲ ಕೃತಿಗೆ ನೀಡುವ ಸಹಾಯಧನಕ್ಕೆ 2005ರಲ್ಲಿ 'ಸಿಂಗಾರಿತ್ಲು' ನಾಟಕ ಆಯ್ಕೆ.,  ಬೆಂಗಳೂರಿನ ಕ್ರೈಸ್ಟ್ ಕಾಲೇಜ್‍ನ ರಾಜ್ಯಮಟ್ಟದ ಕಾವ್ಯ ಸರ್ಧೆಗಳಲ್ಲಿ ಸತತ 1998, 1999, 2000ನೇ ಸಾಲುಗಳಲ್ಲಿ ಬಹುಮಾನ, ಕನ್ನಡ ಸಾಹಿತ್ಯ ಅಕಾಡೆಮಿ 1998ರಲ್ಲಿ ಪ್ರಕಟಿಸಿದ 'ಯುವ ಕಾವ್ಯ'ದಲ್ಲಿ ಕವನ ಸೇರ್ಪಡೆ,  ಕನ್ನಡ ಸಾಹಿತ್ಯ ಅಕಾಡೆಮಿ 1999ರಲ್ಲಿ ಪ್ರಕಟಿಸಿದ 'ಯುವ ಕಥೆ'ಯಲ್ಲಿ 'ಸಿಂಗಾರಿತ್ಲು' ಕಥೆ ಸೇರಿದೆ,  ಬೆಂಗಳೂರು ಆಕಾಶವಾಣಿಯಿಂದ ಕವನಗಳ ಪ್ರಸಾರ, ಚಂದ್ರಶೇಖರ ಪಾಟೀಲರ 'ಸಂಕ್ರಮಣ'ದ ವಾರ್ಷಿಕ ಚುಟುಕು ಕವನ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿದೆ.
 

ಕೆ. ಕರಿಸ್ವಾಮಿ

(15 Jun 1971)