ಲೇಖಕ ಗವೀಶ ಹಿಮಠ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಗ್ರಾಮದವರು. ಪುರಾಣ ಪ್ರವಚನಕಾರ ವೀರಭದ್ರಯ್ಯ-ಪಾರ್ವತಮ್ಮ ದಂಪತಿಯ ಪುತ್ರರು. 08.09.1946 ರಂದು ಜನನ. ಓದಿದ್ದು ಕೊಪ್ಪಳ, ಧಾರವಾಡದಲ್ಲಿ. ಗುಲ್ಬರ್ಗ ವಿ.ವಿ. ಯ ಗ್ರಂಥಾಲಯದ ಪ್ರ.ಸಹಾಯಕರಾಗಿ ನಿವೃತ್ತರಾಗಿದ್ದರು. ಕಳೆದ 50 ವರ್ಷಗಳಿಂದ ಕಲಬುರಗಿಯಲ್ಲೇ ವಾಸವಾಗಿದ್ದರು.
ಜಾಗತೀಕರಣ ಮತ್ತು ಜಾನಪದ. ಡಾ.ಬಿ.ಎಸ್. ಗದ್ದಗಿಮಠ: ಬದುಕು ಬರಹ. ರಂಗಭೂಮಿ ಜೀವ-ಜೀವಾಳ ಶ್ರೀಧರ ಹೆಗಡೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ರಂಗಕನಸುಗಳು (1989-90) ಹಾಗೂ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ರಂಗಾಂತರಂಗ ((2003-04) ಶೀರ್ಷಿಕೆಗಳಡಿ ರಂಗಭೂಮಿ ಕುರಿತು ಅಂಕಣಗಳನ್ನು ಬರೆದು ರಂಗಕರ್ಮಿಗಳನ್ನು ಪರಿಚಯಿಸಿದರು. ಇವರ ಕಲಾವಿದರು ನಡೆದು ಬಂದ ದಾರಿ ಕೃತಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ (1(84) ಪ್ರಶಸ್ತಿ ಬಂದಿದೆ. ಹೊತ್ತು ಮುಳುಗುವ ಮುನ್ನ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಹಾಗೂ ಬೆಂಗಳೂರು ಅತ್ತಿಮಬ್ಬೆ ಪ್ರತಿಷ್ಠಿತ ಪ್ರಶಸ್ತಿ, 2017 ರಲ್ಲಿ ರಂಗಭೂಮಿ ಜೀವ ಜೀವಾಳ ಶ್ರೀಧರ ಹೆಗಡೆ ಕೃತಿಗೆ ಗುಲ್ಬರ್ಗ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ, 1994ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕನ್ನಡಜ್ಯೋತಿ ಪ್ರಶಸ್ತಿ, ಗೋಕಾಕ ದೇವರಾಜ ಅರಸು ಪ್ರಶಸ್ತಿ, ಕಲಬುರಗಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಕಲಬುರಗಿ, ಮದ್ರಾಸ ಹಿಂದಿ ಪ್ರಚಾರ ಸಭಾ ವಿ.ವಿ.ಘಟಕೋತ್ಸವದಲ್ಲಿ ಗೌರವ ಸನ್ಮಾನ ಪ್ರಮುಖವಾಗಿವೆ.
ಕನ್ನಡ ಸಂಘ, ಮುಂಬೈ, ಕನ್ನಡ ಸಂಘ, ದೆಹಲಿ, ವಿಚಾರ ಸಂಕಿರಣ, ಬಹುಭಾಷಾ ಕವಿಗೋಷ್ಠಿ ಗುಂಟೂರು, ಅಖಿಲ ಭಾರತ 66ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಕರ್ನಾಟಕ ರಾಜ್ಯ ಮಹಿಳಾ ವಿ.ವಿ.ವಿಜಯಪುರ ಬಸವೇಶ್ವರ ಕಾಲೇಜು, ಬಾಗಲಕೋಟೆ ಹೀಗೆ ನಾಡು, ಹೊರನಾಡಿನಲ್ಲಿ ಪ್ರಬಂಧ ಮಂಡಿಸಿದ್ದಾರೆ.
ಕರ್ನಾಟಕ ಅಕಾಡೆಮಿ ಸದಸ್ಯರಾಗಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಗುಲಬರ್ಗಾ ವಿ.ವಿ.ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಗಳ ನಿರ್ಣಾಯಕ ಸದಸ್ಯರಾಗಿ, ಕಲಬುರಗಿ ನೃಪತುಂಗ ಬರಹಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.