Story/Poem

ಭುವನಾ ಹಿರೇಮಠ

ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ  ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. 

More About Author

Story/Poem

ಆ ದಿನ ಭಾನುವಾರ

ಆ ದಿನ ಭಾನುವಾರ! ಕಟುಕನೆಡೆಯಿಂದ ಅಂಗಳು ತುಂಬಿ ಹರಿವ ರಕ್ತದ ಕೋಡಿ ಕಿನಾಲು ಸೇರುತ್ತಿತ್ತು ಭೀಕರ ಪ್ರಶಾಂತ ಬೀದಿಯಲಿ ದಾರಿಹೋಕರು ಗಮನಿಸದೆ ನಡೆದರು ಹರಿವ ರಕ್ತದ ಕೋಡಿಯ ಏನೂ ಅರಿಯದ ನಾಯಿಗಳೆರಡು ಬಾಲ ಮುದುರಿಕೊಂಡು ನೆಕ್ಕುತ್ತಿದ್ದವು ಸೂತಕದ ಆ ನೆತ್ತರನು ಬಿಡುವಿರದ ...

Read More...

ಅವ್ವನ ಕೌದಿ

ಅವ್ವ ಹಚ್ಚಿಟ್ಟು ಹೋದ ಕೌದಿಯ ತೇಪೆಚಿತ್ರಗಳು ನಾವು ಬಲು ಬೇತಿನಿಂದ ಹಾಕುತ್ತಿದ್ದಳು ಹೊಲಿಗೆ ಸೂಜಿ ಚುಚ್ಚದ ಹಾಗೆ ಚಿತ್ತಾರ ತಪ್ಪದ ಹಾಗೆ ಅವಳ ಕತೆ ಕಟ್ಟಬೇಕೆಂದರೆ ಕೌದಿಯ ಮೇಲೆ ಹತ್ತಾದವು ನೂರಾದವು ಹೊದ್ದು ಮಲಗಿರೆಂದಳು ಬೆಚ್ಚಗೆ ಅರ್ಧಸ್ತಂಭಾಕಾರದ ಕರಿ ಹಂಚುಗಳು ಬೋರಲಾಗಿ ಬಿ...

Read More...

ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ತೊಟ್ಟಲಕ ಗುಳದಾಳಿ ಕಟ್ಟಿದವರ್ಯಾರ ಕಾಣಬೇಕಂದರ ಕೊಂಚಿಗಿ ಮರಿಯಾತ ಕೊಂಚಿಗಿಯ ದೌರ ಬಾಯಾಗ ಜಬಡೂತ ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ ಕುಂಟಲಪಿ ಆಡ್ಯಾಡಿ ಅಂಡ್ಯಾಳ ತೂರ್ಯಾಡಿ ಗಣಗಳಕಿ ತುಂಬ ಹುಂಚೀಯ ಚಿಗಳಿ ಚಿಟಮೀರಿ ಚನ್ನಕ್ಕನ ಯಾರು ಚಿವಟಿದರೇನ ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬ...

Read More...

ಟ್ರಯಲ್ ರೂಂನ ಅಪ್ಸರೆಯರು

ಅಷ್ಟಷ್ಟೇ ಇಕ್ಕಟ್ಟಿನಲ್ಲಿ ಮೂರೂ ದಿಕ್ಕಿನಿಂದ ಕೈಮಾಡಿ ಕರೆಯುವ ಕನ್ನಡಿಗಳ ಆತ್ಮಕ್ಕೆ ಮಾಟವಿಲ್ಲ, ಆಸೆಗಣ್ಣಿನಿಂದ ಬಯಸಿ ತೊಟ್ಟ ಸ್ಲಿವ್ ಲೆಸ್ ಟಾಪಿನ ಟುಲಿಪ್ ಮೊಗ್ಗು, ದುಬಾರಿ ಪ್ರಿನ್ಸ್ ಕಟ್ ಬೌಜಿನ ಜರಿ ಬಾರ್ಡರು, ಟ್ರಯಲ್ ರೂಮಿನ ಹ್ಯಾಂಗರುಗಳಲ್ಲಿ ಹಾಗೆಯೇ ನೇತುಬಿದ್ದಿವೆ, ...

Read More...

ಎರಡನೇ ದಿನ

  ಮನಸಿನ ಪರವಾನಿಗಿ ಪಡೆದು ಅಂಗಾತ ಮಲಗುತ್ತಾಳೆ ಕನಸು ಬೀಳದ ಹಾಗೆ, ಕನಸು ಅಂತರಂತರ ತೇಲುತ್ತಾ ಪಲ್ಲಂಗದ ಸುತ್ತ ಗಾಳಿಯೊಂದಿಗೆ ಬೆರೆತು ಬೆವರಿ ಮೌನದ ಕೂಡ ಒದರಾಡುವ ಮೌನ ಗಾಳಿಯೊಂದಿಗೆ ಗುದ್ದಾಡುವ ಗಾಳಿ ನೀರಿನೊಂದಿಗೆ ಮಾತನಾಡುವ ನೀರು ಕನಸು ಮೌನಗಳ ನುಂಗುವ ಗಾಳಿ ಗಾ...

Read More...