Story/Poem

ಅನ್ನಪೂರ್ಣಾ ಬೆಜಪ್ಪೆ

ಕವಯತ್ರಿ ಅನ್ನಪೂರ್ಣಾ ಬೆಜಪ್ಪೆ ಅವರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಿದೂರು ಗ್ರಾಮದವರು. ತಂದೆ ಹಳೆಮನೆ ವಿ ಗಣಪತಿಭಟ್, ತಾಯಿ ಪಾರ್ವತಿ. ಕವನ, ಗಝಲ್, ರುಬಾಯಿ,ಚುಟುಕು, ಶಿಶುಗೀತೆ,ಭಾವಗೀತೆ ,ಮುಕ್ತಕ ಸಣ್ಣ ಕಥೆ ಹೀಗೆ ಹಲವಾರು ಪ್ರಕಾರಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

More About Author

Story/Poem

ತರುವನೇನವ ಸುಖವ 

ಹಸುಗೂಸು ಅಳುತಿರಲು ಹಸಿವೆನುತ ಬಳಿಬಂದು ತುಸುವೆ ನೀಡಲು ತುತ್ತು ಬಳಿಯಲಿಲ್ಲ ಬಸಿದರೂ ಜೀವವನೆ ಹುಸಿಯಾಯ್ತು ಕನಸೆಲ್ಲ ದೆಸೆಯೊಳಿತು ನನ್ನೆಡೆಗೆ ಸುಳಿಯಲಿಲ್ಲ ಇರಲೊಂದು ಸೂರಿಲ್ಲ ನೆರವಾಗೊ ಮನವಿಲ್ಲ ಬಿರುಬಿಸಿಲಲೇ ಕರ್ಮ ಸಾಗುತಿದೆ ನಿರತ ಉರಿವ ಬೆಂಕಿಯ ಎದುರು ಸುರಿಸಿದರು ಕಂಬನಿ...

Read More...

ತೃಪ್ತವಾದ ಬದುಕು

ಸಪ್ತಪದಿಯನು ತುಳಿದು ಬಂದಿರೆ ಆಪ್ತ ಕನ್ನಿಕೆ ಬಾಳಲಿ ತಪ್ತಗೊಂಡಿಹ ಬದುಕಿದೆನ್ನದು ತೃಪ್ತಗೊಂಡಿದೆ ನಲಿವಲಿ ಪ್ರೇಮದರಮನೆ ಕಟ್ಟಿಕೊಂಡೆವು ನೇಮಕಿಲ್ಲವೊ ಬಡತನ ಸಾಮರಸ್ಯದ ಪಥವ ಹಿಡಿದೆವು ಧೂಮವಿಲ್ಲದ ಜೀವನ ಬಾಳ ಯಜ್ಞವು ಸಾಗುತಿಹುದು ಒಲವ ಸಮಿಧೆಯ ಬೆರೆಸುತ ಹೂವ ಚೆಲುನಗೆ ಅರಳು...

Read More...