ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||
ರಾಜನ್ಯರಿಪು ಪರಶುರಾಮನಮ್ಮನ ನಾಡು ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು ಓಜೆಯಿಂ ಮೆರೆದರಸುಗಳ ಸಾಹಸದ ಸೂಡು ತೇಜವನು ನಮಗೀವ ವೀರವೃಂದದ ಬೀಡು || 1 ||
ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು ಜಕ್ಕಣನ ಶಿಲ್ಪಿ ಕಲೆಯಚ್ಚರಿಯ ಕರುಗೋಡು ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು || 2 ||
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು ಕಾವೇರಿ ಗೋದೆಯರು ಮೈದೊಳೆವ ನಲುನಾಡು ಅವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು ಕಾವ ಗದುಗಿನ ವೀರನಾರಾಯಣನ ಬೀಡು|| 3 ||
ಗಾಯಕ, ಸಂಗೀತ ಸಂಯೋಜಕ ಇಂಚರ ಪ್ರವೀಣ್ ಕುಮಾರ್. ಮೂಲತಃ ಬೆಂಗಳೂರಿನವರು. ಪುಸ್ತಕ ಓದುವುದು ಅವರ ಆಸಕ್ತಿ.
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಆಶಾ ಜಗದೀಶ್ - ಇರುಳ ಬಣ್ಣದ ಚಿಟ್ಟೆಯಂಥವನು
Punch Line
Gandhada Beedu
©2024 Book Brahma Private Limited.