Poem

ಸೂಫಿಯ ಕಣ್ಣೀರು

ಸೂಫಿ ನೀ ಅಳುವ ಮುನ್ನ
ನನಗೂ ಹೇಳಲಿಕ್ಕಿದೆ
ಆಕೆ ಬರೀ ಅಭ್ಯಾಗತಳಷ್ಟೇ

ಸವಿನಯದ ನಿನ್ನ ಸವಿ ನೋಟ ಸವಿಯಲು
ಸಹಜಾತರಿಗಷ್ಟೆ ಸಾಧ್ಯ ಸೂಫಿ
ಸಾಧ್ಯವಾದರೆ ಅಚಲಿತವಾದ
ಸಾಗರವನ್ನು ಪ್ರೀತಿಸಿ
ಮೊಹಬ್ಬತಿನಿಂದ ಇಬಾದತ್ತಿನೆಡೆಗೆ
ಹೊರಟರೆ ಅಂಗೈ ತೊಳೆಯಲು
ಆಳಕ್ಕಿಳಿದಷ್ಟು ಮೇಲಕ್ಕೇರಲು ಸಾಧ್ಯವಾದಿತು,
ಆಳವೆಷ್ಟಿದ್ದರೂ ನಿನ್ನ ಲೋಪ ಬಯಸಲಾರದು
ಎಲ್ಲಾದರೂ ಚಲಿಸ ಬಯಸಿದರೂ
ದಡ ಸೇರುವುದಕ್ಕೆ ಕಾಯುತ್ತಿರುತ್ತದೆ

ನನಗೂ ತಿಳಿದಿವೆ ಸೂಫಿ
ಅಳು ಬಂದಾಗೆಲ್ಲಾ
ನೀನು ಸಾಗರದೊಳಗೆ ಸೇರಿ
ಬಿಕ್ಕಿ ಬಿಕ್ಕಿ ಅಳುವೆ,
ನಿನ್ನ ಕಣ್ಣೀರಿನ ಪರಿಚಯ
ಸಾಗರದೊಳಗಿನ ನೀರಿಗೆ ಮಾತ್ರ

ಸೂಫಿ ನನಗಿಂತೂ ನಿನ್ನನ್ನು ನೋಡಿದು
ಆಗಸದ ನಕ್ಷತ್ರವು, ಸಾಗರದ ಮುತ್ತು ರತ್ನಗಳೇ
ಕಾರಣ ಅಮಾನಷ್ಯ ಹೃದಯಕ್ಕೆ
ನೀನು ಅಮಾನಷ್ಯನಾಗಿ
ಕತ್ತಲಾದರೆ ನಕ್ಷತ್ರದೊಂದಿಗೆ
ಬೆಳಕಾದರೆ ಸರಿ ಸಾಗರಕ್ಕಿಳಿದು
ಮುತ್ತಿನೊಂದಿಗೆ ಮೊಹಬ್ಬತ್ತನ್ನು ಹಂಚುವೆ

ಹರಿವಿಯಲ್ಲಿ ಹರಿಯುವ
ಸೂಫಿಯ ಕಣ್ಣೀರು
ಕುಡಿಯಲು ಬಂದ ನೊಣ
ಹೀರಿದ್ದು ಒಂದು ಹನಿಯಷ್ಟೆ ಸೂಫಿ!
ನೊಣ ಸಾವು ಬದುಕಿನ ನಡುವೆ
ಹೋರಾಡುತ್ತಿದೆ
ಸಹನೆಯಿಲ್ಲದ ಅಭಾಗ್ಯಳಿಂದ
ಕೋಪಗೊಂಡ ಕಣ್ಣೀರು ಸುಡುತ್ತಿದೆ
ನೊಣಕ್ಕೆ ಸಾವೇ ಗತಿ...

-ಆಮಿರ್ ಬನ್ನೂರು


ಆಮಿರ್ ಬನ್ನೂರು

ಕವಿ ಆಮಿರ್ ಬನ್ನೂರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಕವನ, ಬರವಣಿಗೆ ಹಾಗೂ ಓದು ಅವರ ಆಸಕ್ತಿಕ್ಷೇತ್ರವಾಗಿದೆ. ಪ್ರಸ್ತುತ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಯುವ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ; ತುಮಕೂರಿನ ಮಾತೃ ಭೂಮಿ ಸೇವಾ ಟ್ರಸ್ಟ್ ವತಿಯಿಂದ ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ.

More About Author