Poem

ಸ್ತ್ರೀ..

ಬಿರುದು ಬಾವಲಿಗಳಿಲ್ಲ
ಅಂತರಂಗದ ಒಲವೆಲ್ಲ
ಚೆಲ್ಲಿ ಹೂ ನಗೆಯ ಬೀರುವೆಯಲ್ಲ..
ದುಃಖ ದುಮ್ಮಾನಗಳ ಅಡಗಿಸಿ
ಮಮತೆ ವಾತ್ಸಲ್ಯಗಳ ಹಂಚುವೆಯಲ್ಲ..
ಎಲ್ಲ ಕೈಂಕರ್ಯಗಳಲಿ
ಸರಿಸಮಾನ ಹಸ್ತಕ್ಷೇಪ ಗಳಲಿ
ಹೆಮ್ಮೆ ಆಪ್ತತೆಯಲಿ
ಮಿಂಚುವೆಯಲ್ಲ..
ಯಾರಿಗೆ ಯಾರುಂಟು
ನಿನಗೆ ಸರಿಸಾಟಿಯಾಗುಂಟು
ಬದುಕ ಚಾವಣಿಯಂತುಂಟು
ನಿನ್ನ ಭಾವನೆಗಳ ಗಂಟೆಲ್ಲ..
ಸಕಲ ಪಯಣದಲು ರೂವಾರಿಯಾಗಿ
ಬಾಳ ಹಾದಿಯ ಸಾರಥಿಯಾಗಿ
ನಗುತ ನಗಿಸುವ ಸರದಾರಣಿಯಾಗಿ
ಮೆರೆಯುವೆಯಲ್ಲ..
ಸಂಯಮ ಸಹನೆಯ ಮೂರ್ತಿ
ಎಲ್ಲೆಲ್ಲೂ ನಿನ್ನಯ ಕೀರ್ತಿ
ನೀನಾಗಿಹೆ ಎಲ್ಲದಕು ಸ್ಪೂರ್ತಿ
ಹೆಣ್ಣೇ ನೀ ಸಾಮಾನ್ಯಳಲ್ಲ..
ಸಂಸಾರದ ಹೊಣೆಯ ಹೊತ್ತೆ
ಪ್ರೀತಿ ಒಲವುಗಳ ಕಂತೆ
ನಿನಗಿನ್ನೇನು ಚಿಂತೆ
ಸ್ತ್ರೀ ನೀನು ಸಬಲೆಯಾಗಿಹೆಯಲ್ಲ..
ಕಷ್ಟ ಸಹಿಷ್ಣತೆಯ ವಸುಂಧರೆ
ನೀನೇ ಎಲ್ಲ..ಎಲ್ಲ.

- ನಾಗಶ್ರೀ ಪ್ರಸಾದ್

ವಿಡಿಯೋ
ವಿಡಿಯೋ

ನಾಗಶ್ರೀ ಪ್ರಸಾದ್

ನಾಗಶ್ರೀ ಪ್ರಸಾದ್ ಅವರು ವೃತ್ತಿಯಲ್ಲಿ ಶಿಕ್ಷಕರು. ಬರವಣಿಗೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು, ಶ್ರೀ ಎಂಬ ಕಾವ್ಯನಾಮದಿಂದ ಪರಿಚಿತರು.

More About Author