Poem

ಸಾಂಗತ್ಯ

ಹೇಳಲಾಗದಿರೋ ಹಳೆ ಸೆಳೆತ
ಈಗಂತೂ ಕಾಡುತಿದೆ ಖಂಡಿತ
ಕೆಲವೊಮ್ಮೆ ಹಾಗಾಗೋದು ಖಚಿತ
ಕೈಗೆಟುಕದ ಆಕಾಶದೀಪ
ಕೊಡುವ ಸಂತಸವಿದು
ವಿರಹವೂ ಸಹ ಇದೇ...!

ಅದೆಷ್ಟೇ ಬೇಡವೆಂದರೂ
ಬಿಡದಂಥ ಬಯಕೆಯದು
ಮನದ ಆಳದಲ್ಲೆಲ್ಲೋ ನೆನಪ
ಹೊದಿಕೆ ಹೊದ್ದು ಮಲಗಿದ್ದರೂ
ಆ ಸೆಳೆತದ ಸುವಾಸನೆ ತುಸುವೇ
ಸೋಕಲು ಎಚ್ಚರ ನಿಶ್ಚಿತ....

ಮಳೆಯಲೊಂದು ಕಂಪು
ಈ ಸೆಳೆತದ ಹೊಳಪು
ನಿರಂತರ ಸಾಂಗತ್ಯಕೆ
ಸೋಲುವ ಆತುರತೆ ಹೃದಯಕೀಗ
ಶುರುವಾಗಿದೆ ಸದ್ದಿಲ್ಲದ ಸಹಜತೆಯೊಡನೆ
ಕವಿತೆಯ ಮಾಧುರ್ಯದಂತೆ ಸುಮ್ಮನೆ

ಕಾಣುವುದೆಂತೋ
ಈ ಸೆಳೆತವ ಸೋನೆಯಲಿ

–ಅಜಯ್ ಅಂಗಡಿ

 

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author