Poem

ರಾಷ್ಟ್ರ ಹಿತಕ್ಕೆ ನಮ್ಮ ಸಂವಿಧಾನ

ಅಚ್ಚು ಮುದ್ರಿತವಲ್ಲ ನಮ್ಮ ಸಂವಿಧಾನ
ಹಸ್ತದಿಂದಲೇ ಬರೆಯಲ್ಪಟ್ಟಿದೆ.
ಹಿಂದಿ ಆಂಗ್ಲ ಭಾಷೆಯಲ್ಲಿ ಬರೆಯಲ್ಪಟ್ಟಿದೆ
ಹೀಲಿಯಂ ತುಂಬಿದ ಕವಚದಲ್ಲೇ
ಸಂವಿಧಾನ ಸಂರಕ್ಷಿಸುತ್ತಿದೆ.
ಆದರೂ ಕವಿಯ ಪ್ರಶ್ನೆ
ತುಕ್ಕು ಹಿಡಿಯುತ್ತಿದೆಯೋ ನಮ್ಮ ಸಂವಿಧಾನ..!!?

ಸಂಸತ್ ಭವನದ ಗ್ರಂಥಾಲಯದಲ್ಲಿ
ಭಾರತಕ್ಕೆ ಬೆಳಕಾಗಿ ನಿಂತಿದೆ ಸಂವಿಧಾನ
ಸ್ವಾತಂತ್ರ್ಯ ಸಮಾನತೆ ಹಾಗೂ ಭಾತೃತದ
ಪರಿಕಲ್ಪನೆಯನ್ನೊಂದಿದೆ ನಮ್ಮ ಸಂವಿಧಾನ
ವಿವಿಧ ಕಡೆಗಳಿಂದ ಪಡೆದ "ಅಂಶಗಳ ಚೀಲ"
ಎಂದೇ ಕರೆಯುವರು ನಮ್ಮ ಸಂವಿಧಾನವನ್ನು,
ಆದರೆ ಕವಿಯ ಪ್ರಶ್ನೆ...
ತುಕ್ಕು ಹಿಡಿಯುತ್ತಿದೆಯೋ ನಮ್ಮ ಸಂವಿಧಾನ..!!?

ಸ್ವಾತಂತ್ರ್ಯ ದೇಶಗಳ ಪೈಕಿ
ಅತೀ ಉದ್ದವಾದದ್ದು ನಮ್ಮ ಸಂವಿಧಾನ.
284 ಜನ ಸಂವಿಧಾನ ರಚನಾ ಸಮಿತಿ
ಭಾರತಕ್ಕೆ ನೀಡಿದ ಮಹಾ ವರದಾನ
448 ವಿಧಿಗಳು 25 ಭಾಗಗಳು, 12 ಶೆಡ್ಯೂಲ್,
5 ಅನುಬಂಧಗಳು, 98 ತಿದ್ದು ಪಡಿಗಳನ್ನೊಂದಿದೆ
ನಮ್ಮ ಸಂವಿಧಾನ... ಆದರೆ ಕವಿಯ ಪ್ರಶ್ನೆ
ತುಕ್ಕು ಹಿಡಿಯುತ್ತಿದೆಯೋ ಸಂವಿಧಾನ..!!?

ಹೌದು...
ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ
ಸಂವಿಧಾನಕ್ಕೆ ಬದಲಾವಣೆಯೇ?
ಲಿಖಿತ, ದೀರ್ಘ, ದ್ವಂದ್ವ ಸಂಧಿಗ್ದತೆಗಳಿಲ್ಲದ
ಸಂವಿಧಾನಕ್ಕೆ ಬದಲಾವಣೆಯೇ?
ಶ್ರೇಷ್ಠ ನ್ಯಾಯಾಶಾಸ್ತ್ರಜ್ಞರು, ಸ್ವಾತಂತ್ರ್ಯ ಹೊರಾಟಗಾರರು, ಸಾಮಾಜಿಕ ಚಳುವಳಿಗಾರರು
ಸೇರಿ ಜನ್ಮ ತಾಳಿದ ಸಂವಿಧಾನಕ್ಕೆ ಬದಲಾವಣೆಯೇ?
ಪ್ರಶ್ನೆಯ ಮೇಲೊಂದು ಪ್ರಶ್ನೆ ಕವಿಯ ಮುಂದೆ
ಉಕ್ಕಿ ಬಂದಾಗ ಕವಿ ಹೇಳುತ್ತಿದ್ದಾರೆ ಇಲ್ಲಿ
ನಡೆಯುತ್ತಿದೆ “ಮಹಾ ಭಯೋತ್ಪಾದನೆ"
ಅವರು ಮಾಡುತ್ತಿದ್ದಾರೆ ಸಂವಿಧಾನ
ಬದಲಾಯಿಸುವ ಷಡ್ಯಂತರವನ್ನೆ...
ಬದಲಾಗದು ರಾಷ್ಟ್ರಹಿತಕ್ಕಿರುವ
ನಮ್ಮ ಸುಂದರ ಸಂವಿಧಾನ

-ಆಮಿರ್ ಬನ್ನೂರು

ಆಮಿರ್ ಬನ್ನೂರು

ಕವಿ ಆಮಿರ್ ಬನ್ನೂರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಕವನ, ಬರವಣಿಗೆ ಹಾಗೂ ಓದು ಅವರ ಆಸಕ್ತಿಕ್ಷೇತ್ರವಾಗಿದೆ. ಪ್ರಸ್ತುತ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಯುವ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ; ತುಮಕೂರಿನ ಮಾತೃ ಭೂಮಿ ಸೇವಾ ಟ್ರಸ್ಟ್ ವತಿಯಿಂದ ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ.

More About Author