Poem

ನೆನಪಿನ ಹಾದಿಯಲಿ

ನೆನಪುಗಳ ಮೆರವಣಿಗೆ ಈಗ
ಮನದ ಬೀದಿಯಲಿ ಹೊರಟಿದೆ
ಕನಸುಗಳ ಕೊನೆವರೆಗೆ ಹೀಗೆ
ನೀ ಪೂರ್ತಿ ಇರಬಾರದೆ?

ಒಂದೇ ಹಾಡಿನಲುಂಟು
ಹಲವು ರಾಗಗಳು
ಒಂದೇ ದಾರಿಯಲುಂಟು
ಹಲವು ತಿರುವುಗಳು

ಸುಮ್ಮನೆ ಸೆಳೆತಕೆ ಸೋತರೆ
ಏನರ್ಥವಿದೆ ಹೇಳು?
ಕಣ್ಣಲೇ ಅಳತೆ ಮಾಡಿ
ನೀಡುವೆ ಹೇಗೆ ಪ್ರೀತಿಯ ನೆರಳು?

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author