Poem

ನೆನಪಿಗೆ ಬೀಳ್ಕೊಡುಗೆ

ಹೀಗೇಕೆ ನೀ ಕಾಡುವೆ
ಎಡಬಿಡದೆ ಸುರಿವ ಮಳೆಯಂತೆ
ಮಳೆಯಾದರೂ ನಿಲ್ಲಬಹುದಂತೆ
ನಿಲ್ಲದೇ ಈ ನಿನ್ನ ಸಂತೆ....

ನಾ ದೂರವಿಟ್ಟರೂ
ನೀ ಇರುವೆ ಹತ್ತಿರ
ನಿನ್ನ ನೂರು ದಾಳಿಗೆ
ನಾನಾದೆ ತತ್ತರ

ಹೋಗಿಬಿಡು ನೀ
ಬರದಿರು ಇನ್ನೆಂದೂ
ಹೇಳದೇ ಕೇಳದೇ
ಸತಾಯಿಸದೇ ಪದೇ ಪದೇ

-ಅಜಯ್ ಅಂಗಡಿ

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author