Poem

ನನ್ನ ಗುರುಗಳು (ಎಂ.ಬಿ. ಎಕ್ಕುಂಡಿ)

ಎಂಬತ್ತೆರಡು ವರ್ಷದ ಮುದುಕ
ಬೈಯೋಕು ಬರದ ಮುಗ್ಧಕ
ಮನಸ್ಸು ಶಾಂತಯಾಗಿ ಹರಿಯುವ ನದಿ
ನೋಡಿದರೆ ಪೂಜಿಸುವಂತಹ ಶ್ರೀನಿಧಿ

ಅಜ್ಜನ ಪ್ರೀತಿಯ ನೀಡುತ್ತ
ಪ್ರೀತಿಯಿಂದ ಪಾಠವ ಕಲಿಸುತ್ತ
ನಡುವೆ ಒಮ್ಮೊಮ್ಮೆ ಕೆಮ್ಮುತ್ತ
ಇದು ನನ್ನ ದೇವರ ಪರಿಪಾಠ

ಎಂಬತ್ತೆರಡು ಅಲ್ಲದ ಅಜ್ಜ
ಇಪ್ಪತ್ತೆರಡರಂತಹ ಅಜ್ಜ
ಮಾಡುವುದೆಲ್ಲವ ಒಳ್ಳೆಯ ಕಜ್ಜ
ಮಾಗಿದ ಮಾವಿನ ಸಿಹಿಯ ಗೊಜ್ಜ

ಜೀವನ ಮೌಲ್ಯವ ತಿಳಿಸಿದರು
ಓದುವ ಕೌಶಲ್ಯವ ಕಲಿಸಿದರು.
ಕನಸಿನ ಗುರಿಯನು ತೋರಿದರು
ಆತ್ಮದ ಕೀರ್ತಿಯ ಸಾರಿದರು

ಊರು-ಗೋಲನು ಊರುತ್ತಾ
ಊರು-ಕೇರಿ-ಗೊಲವೇ ತೋರಿಸುತ್ತಾ
ಬೆನ್ನು ಬಾಗಿಸಿ, ತುಟಿಯ ತವಡಿಸಿ
ಕಲಿಸದರು ನಮಗೆ, ತಿದ್ದಿ-ತೀಡಿಸಿ

- ಗದ್ದೆಪ್ಪ ಬಿ. ಗುತ್ತೇದಾರ

 

ವಿಡಿಯೋ
ವಿಡಿಯೋ

ಗದ್ದೆಪ್ಪ ಬಿ. ಗುತ್ತೇದಾರ

ಗದ್ದೆಪ್ಪ ಬಿ. ಗುತ್ತೇದಾರ ಅವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದವರು. 28 ಡಿಸೆಂಬರ್ 1999ರಂದು ಜನನ. ತಂದೆ ಬಸಣ್ಣ ಗುತ್ತೇದಾರ, ತಾಯಿ ಶಾಂತಮ್ಮ ಗುತ್ತೇದಾರ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಲಶೆಟ್ಟಿಹಾಳದಲ್ಲಿ ಮುಗಿಸಿ ಪದವಿ ಪೂರ್ವ ಶಿಕ್ಷಣವನ್ನು ಧಾರವಾಡದ ಹಂಚಿನಮನಿ ಕಾಲೇಜಿನಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ಡಾಕ್ಟರ್‌ ಆಫ್ ಫಾರ್ಮಸಿಯನ್ನು ಅಭ್ಯಸಿಸುತ್ತಿದ್ದಾರೆ. ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಹಂತಗಳಲ್ಲಿ ವಿವಿಧ ಸ್ಪರ್ಧೆಗಳು, ನಾಟಕ, ಭಾಷಣ, ಕ್ವಿಜ್, ಕ್ರೀಡೆ ಹೀಗೆ ಹಲವು ರಂಗಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2014ರ ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ, 2014-15ರ ಪ್ರಜಾವಾಣಿ ಚಾಂಪಿಯನ್‌ಶಿಪ್, 2015ರ ಧಾರವಾಡದಲ್ಲಿ ನಡೆದ 23ನೇ ರಾಜ್ಯ ಮಟ್ಟದ ವಿಜ್ಞಾನ ಸಮಾವೇಶ, 2016ಲ್ಲಿ ನಡೆದ 24ನೇ ಅಖಿಲ ಕರ್ನಾಟಕ ರಾಷ್ಟ್ರೀಯ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿರುತ್ತಾರೆ.

ಕೃತಿ: ಕಂಬನಿ ಕಂಡ ಕನಸು

More About Author