Poem

ಮುರ ಸಂಜೆಯ ಹಕ್ಕಿ

ಸಹಸ್ರಾರು ಮೈಲಿ ಹಾರಿ,
ಆಹಾರ ಅರಸಿ ಮರಳಿ ಗೂಡಿಗೆ ಹೊರಟ ಹಕ್ಕಿಯೊಂದು
ಮನುಷ್ಯನ ಕ್ಷುಲ್ಲಕ ವೇಗಕ್ಕೆ ಉಸಿರು ಚೆಲ್ಲಿತ್ತು.

ಮುರಸಂಜೆಯ ಹೊತ್ತು,
ನೋಡಿಯೂ ನೋಡದಂತೆ ಹೊರಟ
ಮನುಷ್ಯನ ಮನಸ್ಥಿತಿಗೆ ಅದರ ಆತ್ಮ ಹಿಡಿ ಶಾಪ ಹಾಕದೇ,
ಮೂಕ ಮರ್ಮರ ಮರುಗಿತ್ತು.!

ದೂರದ ತೆರದ ಬಯಲಿನ ಗುಡ್ಡದಲ್ಲಿ ಕಡ್ಡಿ,
ಸಿಬಿರುಗಳ ಗೂಡೊಂದು ಮೊಟ್ಟೆಗಳ ಸಮೇತ ಅನಾಥವಾಗಿತ್ತು.!

ಹೆದ್ದಾರಿ ಬದಿಯ ಹಳದಿ ಹೂವೊಂದು ಒಂಟಿಯಾಗಿ
ಹಿಂದಿರುಗಿ ಹೋಗದ ಹಕ್ಕಿಯ ಆತ್ಮದ ಜೊತೆ ಸಂಭಾಷಣಗಿಳಿದಿತ್ತು.

ಓಡೋಡಿ ದಣಿದ ಟ್ರಾಕ್ಟರ್ ಟಯರ್ರುಗಳಲ್ಲಿ
ಮನುಷ್ಯನ ಕ್ರೌರ್ಯದ ಬಿಂಬ ಕನ್ನಡಿಯಂತೆ ಸ್ಪಷ್ಟವಾಗಿ ರುಜುವಾತಯಿತು.

- ಗಿರಿ ವಾಲ್ಮೀಕಿ

ವಿಡಿಯೋ
ವಿಡಿಯೋ

ಗಿರಿ ವಾಲ್ಮೀಕಿ

ಗಿರಿ ವಾಲ್ಮೀಕಿ ಅವರು ಮೂಲತಃ ಹೂವಿನ ಹಡಗಲಿಯವರು. ಅಲೆಮಾರಿ, ಕಾಡುವಾಸಿಯಾಗಿ ಗುರುತಿಸಿಕೊಂಡಿರುವ ಅವರು ಹಲವಾರು ಆಸಕ್ತಿಕ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author