Poem

ಮೆಟ್ಟಿಗೂ ನೋವಿತ್ತು

ನೀನು ಹೊರಟ ಮೇಲೆ
ನಿನ್ನ ಮೆಟ್ಟಿನ ಅಚ್ಚನ್ನು
ಭೇಟಿಯಾದೆ.

ಬೆಟ್ಟದಷ್ಟು ನೋವು
ಹೇಳಬಯಸಿತು,
ಆದರೆ ಹೇಳುವಷ್ಟು
ಸಮಯವಿರಲಿಲ್ಲ.

ಆ ದಿನ ಮೆಟ್ಟುಗಳು ನಿನ್ನನ್ನು ಹೊತ್ತು
ಬಲು ಬೇಗನೆ ಹೊರಡಬೇಕಿತ್ತು
ಈ ಹೃದಯಕ್ಕೆ ಮಸಿ ಬಳಿದವನನ್ನು
ಈ ಹೃದಯವನ್ನೇ ದಾಟಿಕೊಂಡು...




ವಿಡಿಯೋ
ವಿಡಿಯೋ

ಆಮಿರ್ ಬನ್ನೂರು

ಕವಿ ಆಮಿರ್ ಬನ್ನೂರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಕವನ, ಬರವಣಿಗೆ ಹಾಗೂ ಓದು ಅವರ ಆಸಕ್ತಿಕ್ಷೇತ್ರವಾಗಿದೆ. ಪ್ರಸ್ತುತ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಯುವ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ; ತುಮಕೂರಿನ ಮಾತೃ ಭೂಮಿ ಸೇವಾ ಟ್ರಸ್ಟ್ ವತಿಯಿಂದ ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ.

More About Author