Poem

ಮೆಟ್ಟಿ ನಿಂತೆ ಮುಟ್ಟ 

ಮೆಟ್ಟಿ ನಿಂತೆ ಮುಟ್ಟ
ಜಗದಿ ಜೀವಿಯ ಸೃಷ್ಟಿಸಲು
ಮನದ ಒಡಲಲ್ಲಿ ಕುದಿವ
ರಕ್ತ ಕಣಗಳ ಹೋರಾಟದ
ಕಷ್ಟ ನೋವು ಮರೆಯಲು
ಮರೆತು ಮಾತ ಮುರಿಯಲು

ಮೆಟ್ಟಿ ನಿಂತೆ ಮುಟ್ಟ
ಬಾಹು ಬಂಧನದಿ ಬಂಧಿಯಾಗಿ
ಹಿಂಸೆಯ ಪ್ರೀತಿ ಪ್ರೇಮ ನೀಡುತ
ಇಬ್ಬರ ಆಲಿಂಗನದಿ ಜನಿಸಿದ
ಕುವರನ ಕೈ ಎತ್ತಿ ಆಡಿಸಲು

ಮೆಟ್ಟಿ ನಿಂತೆ ಮುಟ್ಟ
ಹರಿವ ಜಲಪಾತದ ಮೇಲೆ
ಬೆಂಕಿ ಉಲ್ಕೆಗಳ ಆರ್ಭಟವಾಗಿ
ಕರಳು ಕಿವುಚಿದರು ಮತ್ತೆ ನಗಲು
ನಕ್ಕು ಎಲ್ಲರೊಂದಿಗೆ ಬೆರೆಯಲು

ಮೆಟ್ಟಿ ನಿಂತೆ ಮುಟ್ಟ
ಋತುಮಾನದ ಋತುವಿನಲಿ ಸಹಿಸದೆ
ನೋವಲಿ ಮಡಿಲು ರಕ್ತಪಾತವಾದರೂ
ಸ್ವರ್ಗದಿ ಮುಕ್ತಿ ಪಡೆಯಲು
ಮೆಟ್ಟಿ ನಿಂತೆ ಮುಟ್ಟ
ಮೆಟ್ಟಿ ನಿಂತೆ ಮುಟ್ಟ

- ಕಿರಣ ಡಿ ಕಳಸಾ ಗುಡೂರ


ಕಿರಣ ಡಿ. ಕಳಸ

ಕವಿ ಕಿರಣ ಡಿ. ಕಳಸ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಗುಡೂರ ಗ್ರಾಮದವರು. ಪ್ರಸ್ತುತ ಕೋ ಅಪ್ ಕ್ರೆಡಿಟ್ ಸೊಸೈಟಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕವಿತೆ, ಬರಹಗಳು ವಿವಿಧ ಪತ್ಕಾರಿಕೆಗಳಲ್ವ್ಯಲಿ ಬೆಳಕು ಕಂಡಿವೆ. 

 

More About Author