Poem

ಹೃದಯದ ಮಾತು

ಹೃದಯದ ಮಾತನು ಕೇಳು ಕಿವಿಗೊಟ್ಟು
ಏನೋ ಹೇಳುತಿದೆ ಕೇಳು ಮನವಿಟ್ಟು

ಒಲವ ಧಾರೆಯನು ಹರಿಬಿಡುವ ಮುನ್ನ
ಹರಿವ ದಾರಿಯನು ಅರಿವುದು ಚೆನ್ನ

ಕನಸಿನ ಪುಟವನು ತೆರೆದ ನಂತರ
ಓದು ನಿಲ್ಲಿಸದೆ ನಿತ್ಯ ನಿರಂತರ

ಸತತ ಸಾಗುವುದೀ ಬಾಳ ಪಯಣ
ಇರಲಿ ಓಡುವ ಮನಕೊಂದು ನಿಲ್ದಾಣ

ಅನಿಸಿದ್ದೆಲ್ಲವ ಮಾಡುವ ಬದಲು
ಅನುಭವಕೆ ಬೆಲೆ ಕೊಡು ಮೊದಲು

● ಅಜಯ್ ಅಂಗಡಿ

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author