Poem

ಹೆಣ್ಣುಸಿರ ತಲ್ಲಣಗಳು 

ಅವಳು ಈಗಲೂ ತಲ್ಲಣಿಸುವಳು
ಮನೆಯೊಳಗಿನ ಕಿಚ್ಚು ನಂದಿಸಲಾಗದೆ
ಒಪ್ಪದಿರುವ ಸಂಬಂದಗಳ ಬಂದಿಯಾಗಿ
ಹೊರ ಬಂದು ಜೀವಿಸಲಾಗದೆ
ಮಾನ ಅಪಮಾನಗಳ ಸಹಿಸಲಾಗದೆ

ಮಾತಿನ ಮರ್ಮತೆಯಲಿ
ಗೊಂದಲಕ್ಕೆ ನಡುಗಿ ನೀರಾಗುತಲಿ
ಮತ್ತೆ ಮತ್ತೆ ಸತ್ತು ಜೀವಿಸುತಲಿ
ಬೆನ್ನಿಗಂಟಿದಂತೆ ಸಹಿಸಲಾರದ ನೋವಿನಲಿ
ತಳಮಳಗೊಂಡು ಉಸಿರ ಗಟ್ಟಿ ಹಿಡಿಯುತ
ಒಳ ಒಳಗೆ ಒಬ್ಬಳೇ ತಲ್ಲಣಿಸುವಳು

ಅಸಮಾಧಾನದ ಸ್ಥಿತಿಯಲಿ
ಪ್ರೀತಿ ಪ್ರೇಮ ನಂಬಿಕೆಯ ಊರಿನಲಿ
ಮೋಸ ವಂಚನೆ ದುಗುಡಗಳಿಗೆ ಒಳಗಾಗುತಲಿ
ಬಿಡದೆ ಜೀವವ ಹಿಡಿದು ಕೈಯಲ್ಲಿ
ಮನದೊಳಗೆ ಕಷ್ಟ ನೋವ ನುಂಗುತ
ಸದಾ ಹಸನ್ಮುಖಿಯಂತೆ ತಲ್ಲಣಿಸುವಳು

- ಕಿರಣ ಡಿ ಕಳಸಾ, ಗುಡೂರ.

ಕಿರಣ ಡಿ. ಕಳಸ

ಕವಿ ಕಿರಣ ಡಿ. ಕಳಸ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಗುಡೂರ ಗ್ರಾಮದವರು. ಪ್ರಸ್ತುತ ಕೋ ಅಪ್ ಕ್ರೆಡಿಟ್ ಸೊಸೈಟಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕವಿತೆ, ಬರಹಗಳು ವಿವಿಧ ಪತ್ಕಾರಿಕೆಗಳಲ್ವ್ಯಲಿ ಬೆಳಕು ಕಂಡಿವೆ. 

 

More About Author