Poem

ಹಸಿರುಮನೆ

ಹಸಿರು ವನಗಳ ನಡುವೆ
ಉಸಿರಾಡುವುದೇ ಆನಂದ
ಪಕ್ಷಿಗಳ ಚಿಲಿಪಿಲಿ ಕಲರವ
ಪ್ರಾಣಿಗಳ ವಿಶಿಷ್ಟ ಆರವ
ಕೇಳುತಿರಲು ಮನಕೆ ಹಿತ

ಸುಮಗಳ ಅಂದ ಸುಗಂಧ
ಫಲಗಳ ರಸಭರಿತ ಸ್ವಾದ
ಹಸಿರೆಲೆಯ ಚಿಗುರು
ಪ್ರಕೃತಿಯ ಉಸಿರು
ಎಲ್ಲವೂ ನಿತ್ಯ ನಿರಂತರ

ಒಮ್ಮೆಯಾದರೂ ಈ ಅನುಭವವ
ಅನುಭವಿಸಬೇಕು ಜೀವನದಿ
ಹೈಟೆಕ್ ಅರಮನೆಗಿಂತ
ಈ ಬಯೋಟೆಕ್ ಹಸಿರುಮನೆ
ಕೊಡುವ ನೆಮ್ಮದಿ ಅಗಾಧ ಅನಂತ

● ಅಜಯ್ ಅಂಗಡಿ

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author